ಮನೆಯ ಟೇರೆಸ್ ನಿಂದ ಕೆಳಕ್ಕೆ ಬಿದ್ದು ಕೃಷಿಕರೊಬ್ಬರು ಸಾವನ್ನಪ್ಪಿದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಗುಂಡಿಯಂಗಡಿ ಬಳಿ ನಡೆದಿದೆ.
ಜನಸಂಘದ ಗ್ರಾಮ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ವೇಣುಗೋಪಾಲ ನಾರ್ಣಕಜೆಯವರು ಪತ್ನಿಯ ನಿಧನದ ಬಳಿಕ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.
ಅವರ ಮೂವರು ಮಕ್ಕಳು ವಿದೇಶದಲ್ಲಿದ್ದಾರೆ.









ಜ.24 ರ ಬೆಳಿಗ್ಗೆ ಅವರು ಟೆರೆಸ್ ಮೇಲೆ ಬಟ್ಟೆ ಒಣಗಲು ಹಾಕುತ್ತಿದ್ದಾಗ ಆಯ ತಪ್ಪಿ ಕೆಳಕ್ಕೆ ಬಿದ್ದರೆನ್ನಲಾಗಿದೆ. ಆ ಸಂದರ್ಭ ಸನ್ ಶೇಡ್ ತಲೆಗೆ ಬಡಿದು ತೀವ್ರವಾಗಿ ಗಾಯಗೊಂಡರೆಂದೂ, ರಬ್ಬರ್ ಟ್ಯಾಪಿoಗ್ ನವರು ಬಂದಾಗ ಇವರು ಬಿದ್ದಿರುವುದನ್ಬು ಕಂಡು ಸಮೀಪದ ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಅವರು ಬಂದು ಸುಳ್ಯದ ಆಸ್ಪತ್ರೆಗೆ ಕರೆದೊಯ್ದರೆಂದೂ, ಆ ವೇಳೆಗೆ ವೇಣುಗೋಪಾಲರು ಕೊನೆಯುಸಿರೆಳೆದಿದ್ದರೆಂದೂ ತಿಳಿದು ಬಂದಿದೆ.
ವಿದೇಶದಲ್ಲಿರುವ ಅವರ ಮಕ್ಕಳು ಬಂದ ಬಳಿಕ ಜ. 25ರಂದು ಅಂತ್ಯ ಸಂಸ್ಕಾರ ನೆರವೇರಿತು.









