ಯೇನೆಕಲ್ಲು ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

0

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಭವಾನಶಂಕರ ಪೂಂಬಾಡಿ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಗಿರೀಶ್ ಪದ್ನಡ್ಕ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಶೋಭ ಚುನಾವಣೆ ನಡೆಸಿಕೊಟ್ಟರು.


ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.
ಈ ಸಂದರ್ಭದಲ್ಲಿ ಭರತ್ ನೆಕ್ರಾಜೆ, ಶಿವಪ್ರಸಾದ್ ಮಾದನಮನೆ, ದುರ್ಗಾಪ್ರಸಾದ್ ಪರಮಲೆ, ಗೋಪಾಲ ಎಂ. ಮಾಣಿಬೈಲು, ಅಶೋಕ್ ನೆಕ್ರಾಜೆ, ರಮೇಶ್ ಹೊಸೋಳಿಕೆ, ಶ್ರೀಮತಿ ವಿಶಾಲಾಕ್ಷಿ‌ ದಯಾನಂದ ಕುಕ್ಕಪ್ಪನಮನೆ, ಶ್ರೀಮತಿ ಶಶಿಕಲಾ‌ ಕುಶಾಲಪ್ಪ ಅಮೈ, ತಿಮ್ಮಪ್ಪ ಪೂಜಾರಿ ಉಜಿರ್ ಕೋಡಿ, ಪ್ರಶಾಂತ್ ದೋಣಿಮನೆ ಉಪಸ್ಥಿತರಿದ್ದರು.