ಕ್ಯಾಸನೂರು ಕಾಡಿನ ಕಾಯಿಲೆ: ಮಂಗನ ಕಾಯಿಲೆ ಬಗ್ಗೆ ತಿಳಿದುಕೊಳ್ಳಿ

0

ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ

ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಬಗ್ಗೆ ಭಯಬೇಡ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು

1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಈ ಕಾಯಿಲೆ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ : ಮಂಗನ ಕಾಯಿಲೆ ಎಂದು ಕರೆಯಲಾಯಿತು.

ಮಂಗನ ಕಾಯಿಲೆಗೆ ಕಾರಣ ವೈರಾಣುಗಳು

ಇದು ಕಾಡಿನಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಈ ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂಚನೆ.

ರೋಗದ ಮುಖ್ಯ ಲಕ್ಷಣಗಳು :

  1. ಸತತ ಎಂಟು – ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ,
  2. ವಿಪರೀತ ತಲೆನೋವು, ಸೊಂಟನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು.
  3. ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗಬಹುದು.
  4. ಸನ್ನಿವಾತ / ಮೆದುಳಿನ ಹೊದಿಕೆಯ ಜ್ವರ ಕ್ಷಣಗಳು
  5. ರೋಗದ ತೀವ್ರತೆಯು ರೋಗಿಯ ಪ್ರತಿರೋಧನೆ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.

ಮುಂಜಾಗ್ರತಾ ಕ್ರಮ :

  1. ಈ ಕಾಯಿಲೆಯ ಲಕ್ಷಣಗಳು : ವಾಸ ಸ್ಥಳದ ಸುತ್ತಮುತ್ತ / ಊರಿನಲ್ಲಿ ಮಂಗ ಸತ್ತಿರುವುದು ಕಂತೊಡನೆ ಸ್ಥಳೀಯ ಆರೋಗ್ಯಾಧಿಕಾರಿಗಳು / ಆರೋಗ್ಯ ಕಾರ್ಯಕರ್ತರಿಗೆ ತಿಳಿಸುವುದು.
  2. ಮಂಗ ಸಾಯುತ್ತಿರುವ ಕಾಡಿನಲ್ಲಿ ಸಂಚರಿಸುವಾಗ ಮೈತುಂಬಾ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಿಸುವ ಡಿ. ಎಂ. ಪಿ. ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಬಿಸಿನೀರಿನಿಂದ ಸೋನು ಹಚ್ಚಿ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು.
  3. ಸತ್ತ ಮಂಗದ ಮರಣೋತ್ತರ ಪರೀಕ್ಷೆಗಾಗಿ ಎ.ಡಿ.ಎಲ್. ಶಿವಮೊಗ್ಗಕ್ಕೆ ಕಳಿಸುವುದು.. ಸುತ್ತಮುತ್ತ ಇರುವ ಉಣ್ಣೆಗಳ ಸಂಗ್ರಹಣೆ ಮಾಡುವುದು. ಸತ್ತ ಮಂಗನ ಅವಶೇಷಗಳನ್ನು ಸುಡುವುದು ಹಾಗೂ 50 ಮೀಟರ್ ಪರಿಧಿಯಲ್ಲಿ ಮೆಲಾಥಿಯನ್ ದ್ರಾವಣ ಸಿಂಪಡಿಸುವುದು. ಇವುಗಳನ್ನು ಆರೋಗ್ಯ ಸಿಬ್ಬಂದಿ ಮಾಡುವರು.

ಚುಚ್ಚುಮದ್ದು :

  1. ಈ ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿರುತ್ತದೆ.
  2. ಈ ಲಸಿಕೆಯಿಂದ ಯಾವುದೇ ದುಷ್ಪರಿಣಾಮ ಇರುವುದಿಲ್ಲ.
  3. ಈ ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ಮಾಹೆಯಲ್ಲಿ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2ನೇ ವರಸೆ ಲಸಿಕೆ ಪಡೆಯುವುದು. 2ನೇ ಚುಚ್ಚುಮದ್ದು ಹಾಕಿಸಿಕೊಂಡ 30 ದಿನಗಳ ನಂತರವೇ ನಿರೋಧಕಶಕ್ತಿ ಬರುತ್ತದೆ.
  4. ಪ್ರತೀ ವರ್ಷ ವರ್ಧಕ Booster- ಬಲ ವರ್ಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು.
  5. ಗರ್ಭಿಣಿ ಸ್ತ್ರೀಯರು ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬಾರದು.

ಗಮನಿಸಬೇಕಾದ ಮುಖ್ಯ ಅಂಶಗಳು

  1. ಈ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ದಿಷ್ಟವಾದ ಔಷಧಿ ಇರುವುದಿಲ್ಲ.
  2. ಈ ಉಯಿಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುವುದರಿಂದ ನಿರ್ಧಾರ ಮಾಡಿ ಇಂತಹ ನಿರ್ದಿಷ್ಟ ಸ್ಥಳಕ್ಕೆ ಕಾಯಿರ ಬರುವುದಾಗಿ ಹೇಳುವುದು ಅಸಾಧ್ಯ ಆದಕಾರಣ ಪ್ರತಿಯೊಬ್ಬರು ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.