ಕುಕ್ಕೆ ಸುಬ್ರಹ್ಮಣ್ಯ ದಿಂದ ಕೇರಳದ ಇಡುಕ್ಕಿ ಗೆ 440ಕಿ.ಮಿ. ನಡೆದೇ ಹೊರಟ ಒಂದೇ ಮನೆಯ ಸದಸ್ಯರು!!
ಚಂದ್ರಶೇಖರ ಕಡೋಡಿ ಮತ್ತು ಗುತ್ತಿಗಾರು ಚರ್ಚ್ ಫಾದರ್ ಆದರ್ಶ್ ಜೋಸೆಫ್ ಅವರಿಂದ ಸೂಕ್ತ ವ್ಯವಸ್ಥೆ
ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ, ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರು ಕಡೆಗೆ ತೆರಳಿದ್ದು ಅಲ್ಲಿಂದ ಮಾಹೇ ಚರ್ಚಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ತಮ್ಮಲಿದ್ದ ಲಗೇಜ್ ನಲ್ಲಿ ಪರ್ಸ್ ಮೊಬೈಲ್ ಸಮೇತ ಇಟ್ಟಿದ್ದು ಕಳ್ಳರು ಸಂಪೂರ್ಣ ಲಗೇಜ್ ಕದ್ದಿದ್ದು ದಿಕ್ಕು ತೋಚದೆ ಅವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಬಂದಿದ್ದು ನಂತರ ದೂರ ಕೇರಳದ ಇಡುಕ್ಕಿಯ ತೊಕೂದುರು ಎಂಬ ಸ್ಥಳಕ್ಕೆ ನಡೆದು ಹೋಗುತ್ತಾ ಗುತ್ತಿಗಾರು ತಲುಪಿದ್ದು, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಗಮನಕ್ಕೆ ಶೇಷಪ್ಪ ನಾಯ್ಕ್ ಹಾಲೇಮಜಲು ತಂದಿದ್ದು ತಕ್ಷಣವೇ ಅವರನ್ನು ಉಪಚರಿಸಿ, ಚರ್ಚ್ ಫಾದರ್ ಆದರ್ಶ್ ಜೋಸೆಫ್ ಅವರೊಂದಿಗೆ ಮಲೆಯಾಳ ಮಾತಾಡಿಸಿ ಅವರನ್ನು ಊರಿಗೆ ಬಸ್ ಮೂಲಕ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಬಸ್ ವೆಚ್ಚವನ್ನ ಚರ್ಚ್ ಫಾದರ್ ಆದರ್ಶ್ ಜೋಸೆಫ್ , ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ ಸ್ವಾತಿಕ್ ಕನ್ನಡ್ಕ, ಭರತ್ ದೇರುಮಜಲ್, ಶೇಷಪ್ಪ ನಾಯ್ಕ್ ಒಟ್ಟು 3800/ಅನ್ನು ಚಂದ್ರಶೇಖರ ಕಡೋಡಿ ಅವರು ಸಂಗ್ರಹಿಸಿ ಕಳುಹಿಸಿ ಕೊಟ್ಟಿರುತ್ತಾರೆ.