ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಜ್ಞಾನದೀಪ ಕಾರ್ಯ ಕ್ರಮದಡಿ ಎಸ್.ಡಿ.ಎಂ.ಸಿ. ಪೆರಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡಲು 10 ಜೊತೆ ಬೆಂಚ್ ಮತ್ತು ಡೆಸ್ಕ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಒಕ್ಕೂಟದ ಅಧ್ಯಕ್ಷ ರೋಹಿತಾಶ್ವ ನಿಡ್ಯಮಲೆ, ಕಾರ್ಯದರ್ಶಿ ವನಿತಾ ನಿಡ್ಯಮಲೆ, ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ವಿನಯ್ ಕುಮಾರ್ ನೆಡ್ಚಿಲ್, ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಮಜಿಕೋಡಿ, ಸೊಸೈಟಿಯ ನಿರ್ದೇಶಕ ಜಯರಾಮ್ ಎನ್. ಬಿ. , ಸೇವಾ ಪ್ರತಿನಿಧಿ ಶ್ರೀಮತಿ ಕವಿನಾ ಪೆರಂಗಾಜೆ, ಮೇಲ್ವಿಚಾರಕ ಸಂತೋಷ್, ಸಂಪಾಜೆ ಹಾಗೂ ಪೆರಾಜೆ ಕ್ಲಸ್ಟರ್ ನ ಸಪ್ಪನ್ಮೂಲ ವ್ಯಕ್ತಿ ಚಂದ್ರಶೇಖರ್ , ಶಾಲಾ ಮುಖ್ಯೋಪಾಧ್ಯಾಯರು , ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.