ಇತಿಹಾಸ ಪ್ರಸಿದ್ದ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧ್ವಜಾರೋಹಣ – ಶ್ರೀ ದೇವರ ಜಾತ್ರೋತ್ಸವ ಆರಂಭ

0

ಭಕ್ತಿ ಪೂರ್ವಕ ಮೆರವಣಿಗೆಯ ಮೂಲಕ ಸಮಾರ್ಪಿಸಲ್ಪಟ್ಟ ಹಸಿರುವಾಣಿ

ಸುಳ್ಯ ಮತ್ತು ಕೇರಳದ ಗಡಿ ಪ್ರದೇಶವಾದ, ಇತಿಹಾಸ ಪ್ರಸಿದ್ಧ ಬಂದಡ್ಕದ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಧ್ವಜರೋಹಣದ ಮೂಲಕ ಇಂದಿನಿಂದ ಆರಂಭ ಗೊಂಡಿತು.

ಅದಕ್ಕೂ ಮೊದಲು ಭಕ್ತಿ ಪೂರ್ವಕವಾಗಿ ಮೆರವಣಿಗೆಯಲ್ಲಿ ಬಂದು ಹಸಿರುವಾಣಿ ಸಮರ್ಪಸಲಾಯಿತು.

ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.