ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನಡೆದ
ಶ್ರೀ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನವಿದ್ಯಾರ್ಥಿಗಳು ಸ್ಪರ್ಧಿಸಿ ದ್ವಿತೀಯ ಸ್ಥಾನಗಳಿಸಿದ್ದು ಅವರನ್ನು ದೈವಸ್ಥಾನದ ವತಿಯಿಂದ ಫೆ3ರಂದುಅಭಿನಂದಿಸಲಾಯಿತು.

ಇತ್ತೀಚೆಗೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನ ಐದು ಮಂದಿ ವಿದ್ಯಾರ್ಥಿನಿಯರಾದ ಕು.ಪೌರ್ಣಮಿ, ಕು.ತನ್ವಿ ಕೆ.ಟಿ, ಕು.ಹಿಮಾದ್ರಿ ಸಿ.ಎಮ್, ಕು.ಅಶ್ವಿತಾ ಎಂ.ಟಿ, ಕು.ಸಹನಾ ಎಸ್ ರವರನ್ನುಅಭಿನಂದಿಸಲಾಯಿತು.ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಿಕ್ಷಕರಾದ ಪೂರ್ಣಿಮಾ ಟಿ, ಲತಾ ವೆಂಕಟೇಶ ಪೈ
ಯವರನ್ನು ಹಾಗೂ ನಿರ್ದೇಶಿಸಿಮಾರ್ಗದರ್ಶನನೀಡಿದ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಮತ್ತು ಮಮತಾ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ದೈವಸ್ಥಾನದ ಮೊಕ್ತೇಸರ ರಾದ ಅಶೋಕ ಪ್ರಭು ರವರು ವಹಿಸಿದ್ದರು.















ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಲೆಟ್ಟಿ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ನಾಗಪಟ್ಟಣ ಸದಾಶಿವ ದೇವಸ್ಥಾನದ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ನಿವೃತ್ತ ಉಪನ್ಯಾಸಕಿ ಶ್ರೀಮತಿ ಪದ್ಮಿನಿ ಪ್ರಭು ಸುಳ್ಯ ಹಾಗೂವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮತ್ತು ರಘು ಸುಳ್ಯ ರವರು ಕಾರ್ಯಕ್ರಮ ನಿರ್ವಹಿಸಿದರು.










