ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಸಮಾಲೋಚನಾ ಸಭೆ

0


ಸ .ಹಿ.ಪ್ರಾ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಜ. 5ರಂದು
ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಶಾಲಾ ಭವಿಷ್ಯದ ಮತ್ತು ಹಿರಿಯ ವಿದ್ಯಾರ್ಥಿಗಳ ಬಲವರ್ಥನೆ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.
ಮುಂದಿನ ಶೈಕ್ಷಣಿಕ ವರ್ಷದಿಂದ LKG/ UKG ತರಗತಿಗಳನ್ನು ನಡೆಸುವ ಮತ್ತು ಶಾಲೆಯ ಎಡಬದಿಯ ಪ್ರವೇಶ ದ್ವಾರವನ್ನು ಮುಚ್ಚಿ ಎದುರುನಿಂದ ಪ್ರವೇಶ ಮಾಡುವ ಹಾಗೆ ರಚನೆ ಮಾಡುವುದು, ಹಿರಿಯ ವಿದ್ಯಾರ್ಥಿ ಸಂಘವನ್ನು ಪುನಃ ರಚನೆ ಮಾಡುವ ಬಗ್ಗೆ ನಿರ್ಮಾನಿಸಲಾಯಿತು.


2005/26ನೇ ಸಾಲಿನ 1ರಿಂದ 7ನೇ ತರಗತಿಯವರೆಗಿನ ಮಕ್ಕಳ ಸಮವಸ್ತವನ್ನು ದಾನಿಗಳಾದ ಮಾಯಿಲಪ್ಪ ಗೌಡ ಪಿಲಂಕುಜೆಯವರು ನೀಡುವುದಾಗಿ ಭರವಸೆ ಕೊಟ್ಟರು.
ಸಭೆಯಲ್ಲಿ SDMC ಸದಸ್ಯರು, ವಿದ್ಯಾರ್ಥಿ ಪೋಷಕರು, ಊರಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.


ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ನಡುಬೈಲು, ಮುರುಳ್ಯ ಗ್ರಾಮ ಪಂ. ಅಧ್ಯಕ್ಷೆ ವನಿತಾ ಸುವರ್ಣ, ಸದಸ್ಯರಾದ ಶೀಲಾವತಿ ಗೊಳ್ತಿ, ಪುಷ್ಪಾವತಿ ಕುಕ್ಕಟ್ಟೆ, ಶಾಲಾ ಮುಖ್ಯ ಶಿಕ್ಷಕಿ ಸೀತಾ ವಿ, SDMC ಅಧ್ಯಕ್ಷ ದಿನೇಶ ನಡುಬೈಲು ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಸೀತಾ ಸ್ವಾಗತಿಸಿ, ಶಿಕ್ಷಕ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
SDMC ಅಧ್ಯಕ್ಷ ದಿನೇಶ್ ನೆಡುಬೈಲು ಪ್ರಾಸ್ತಾಹಿಕ ಮಾತುಗಳ್ನಾಡಿ ಶಿಕ್ಷಕಿ ಉಷಾ ಹೇಮಳ ವಂದಿಸಿದರು.