ಕಲ್ಲುಗುಂಡಿ ಸಂಪತ್ ಕೊಲೆ ಪ್ರಕರಣ : ಒಂದನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು

0

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದ ಒಂದನೇ ಆರೋಪಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.

2020ರ ಅಕ್ಟೋಬರ್ 8ರಂದು ಸುಳ್ಯ ಶಾಂತಿನಗರದ ಬಾಡಿಗೆ ಮನೆಯಲ್ಲಿದ್ದ ಕಲ್ಲುಗುಂಡಿಯ ಸಂಪತ್ ಎಂಬವರನ್ನು 8 ಮಂದಿಯ ತಂಡ ಅಟ್ಟಾಡಿಸಿಕೊಂಡು‌ ಹೋಗಿ ಕೊಲೆ ಮಾಡಿತ್ತು. ಆ ಎಲ್ಲ ಆರೋಪಿಗಳನ್ನು ಪೋಲೀಸರು ಬಂದಿಸಿದ್ದರು.

ಅವರಲ್ಲಿ ಒಂದನೇ ಆರೋಪಿಯಾಗಿರುವ ಮನೋಹರ್ ಕೆ.ಎಸ್. ಯಾನೆ ಮನು ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪುತ್ತೂರು ಇಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ, ಬಿಡುಗಡೆಗೆ ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.

ಆರೋಪಿಯ ಪರವಾಗಿ ವಕೀಲರಾದ ವಿಕ್ರಮ್ ಹೆಗ್ಡೆ ಮಂಗಳೂರು ಮತ್ತು ಯಸ್.ಕೆ. ವಿನಯ್ ಸೋಣಂಗೇರಿ ವಾದಿಸಿದ್ದಾರೆ.