ಅಖಿಲ್ ಬುಡ್ಲೆಗುತ್ತು ಉದ್ಯೋಗ ನಿಮಿತ್ತ ಜಪಾನ್ ಗೆ

0

ಹೈದರಾಬಾದಿನ (ಜರ್ಮನ್) ಝಡ್ ಎಫ್ ಕಂಪೆನಿಯಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕನಕಮಜಲು ಗ್ರಾಮದ ಅಖಿಲ್ ಬುಡ್ಲೆಗುತ್ತು ಅವರು ಉದ್ಯೋಗ ನಿಮಿತ್ತ ಜಪಾನ್ ದೇಶದ ಯೋಕಾಹಾಮಗೆ ಫೆ.8ರಂದು ತೆರಳಿದ್ದಾರೆ.
ಅಖಿಲ್ ಬುಡ್ಲೆಗುತ್ತು ಅವರು ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಹಾಗೂ ಶ್ರೀಮತಿ ಭವಾನಿ ದಂಪತಿಗಳ ಪುತ್ರ. ಹೈದರಾಬಾದಿನ (ಜರ್ಮನ್) ಝಡ್ ಎಫ್ ಕಂಪೆನಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೀನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತ್ನಿ ಶ್ರೀಮತಿ ಹಿತಾಶ್ರೀ ಜೊತೆಗೆ ಜಪಾನ್ ಗೆ ತೆರಳಿದ್ದಾರೆ.