ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರ್ವಿಕ್ಕಲ್ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಕ್ಲಬ್ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಶನಿವಾರ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಹಾಜರಿದ್ದರು. ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ಕ್ಯಾನ್ಸರ್ ರೋಗದ ಹಿನ್ನೆಲೆ, ವಿವಿಧ ರೀತಿಯ ಕ್ಯಾನ್ಸರ್, ಹಬ್ಬವಿಕೆ ,ಮುಂಜಾಗ್ರತಾ ಕ್ರಮಗಳು, ಸರ್ವಿಕಲ್ ಕ್ಯಾನ್ಸರ್ನ ವಿವಿಧ ಹಂತಗಳು, ಅವುಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು. ಹಾಗೆಯೇ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು .ವೇದಿಕೆಯಲ್ಲಿ ರೋಟರಿ ಜೋನಲ್ ಲೆಪ್ಟಿನೆಂಟ್ ವಿಶ್ವನಾಥ ನಡುತೋಟ, ಇನ್ನರ್ವೇಲ್ ಕ್ಲಬ್ ಅಧ್ಯಕ್ಷೇ ಶೃತಿ ಮಂಜುನಾಥ್, ಕುಮಾರಸ್ವಾಮಿ ವಿದ್ಯಾಲಯದ ಮುಖ್ಯೋಪಾಧ್ಯಾಯನಿ ವಿದ್ಯಾರತ್ನ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾl ಸಂಕೀರ್ತ ಹೆಬ್ಬಾರ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ನವೀನ್ ವಾಲ್ತಾಜೆ, ಇನ್ನರ್ ವೇಲ್ ಕ್ಲಬ್ಬಿನ ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ಸದಸ್ಯರುಗಳಾದ ಸುನೀತ ನವೀನ್, ವಿಮಲ ರಂಗಯ್ಯ, ಭಾರತಿ ದಿನೇಶ್, ಕುಮಾರಸ್ವಾಮಿ ವಿದ್ಯಾಲಯದ ಶಿಕ್ಷಕರು ಹಾಜರಿದ್ದರು.

ವಿದ್ಯಾಲಯದ ಶಿಕ್ಷಕಿ ವನಿತ ಉದಯಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ ನಾಯರ್ ಸ್ವಾಗತಿಸಿ, ಶೃತಿ ಮಂಜುನಾಥ್ ವಂದಿಸಿದರು.