ದೆಹಲಿಯ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ಬಿಜೆಪಿ ವಿಜಯೋತ್ಸವ

0

ಕುಂಭಮೇಳದಂತಹ ಪುಣ್ಯ ಕಾರ್ಯದ ಸಂದರ್ಭ ಬಿಜೆಪಿ ಗದ್ದುಗೇರಿರುವುದು ಸುಯೋಗ- ಕು.ಭಾಗೀರಥಿ ಮುರುಳ್ಯ

ದೆಹಲಿಯಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಡಳಿತದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ನಾಯಕರು ಮತ್ತು ಕಾರ್ಯಕರ್ತರಿಂದ ವಿಜಯೋತ್ಸವವು ಇಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು.

ಈಸಂದರ್ಭದಲ್ಲಿ ಮಾತನಾಡಿದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ” ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆ ಹಾಗೂ ನಿರ್ಮಲ ಸೀತಾರಾಮ ರವರು ಮಂಡಿಸಿದ ಬಜೆಟ್ ನ್ನು ಸ್ವಾಗತಿಸಿದ ಮತದಾರರು ಬಿಜೆಪಿ ಯನ್ನು ಬೆಂಬಲಿಸಿದ್ದಾರೆ.
ದೆಹಲಿಯ ಜನತೆ ಜ್ಞಾನವಂತರಾಗಿದ್ದು ಬದಲಾವಣೆಯನ್ನು ಬಯಸಿದ್ದಾರೆ.


ಕುಂಭ ಮೇಳದಂತ ಪುಣ್ಯ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ಗದ್ದುಗೇರಿರುವುದು ನಮಗೆಲ್ಲರಿಗೂ ಸಂತಸದಾಯಕವಾಗಿದೆ. ಇಂದು ಸಾಂಕೇತಿಕವಾಗಿ ವಿಜಯೋತ್ಸವ ಮಾಡಲಾಗುತ್ತಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲಿದ್ದೇವೆ ಎಂದು ಅವರು ಹೇಳಿದರು.

ಬಿಜೆಪಿ ಮಂಡಲ ಅದ್ಯಕ್ಷ ವೆಂಕಟ್ ವಳಲಂಬೆ ಯವರು ಮಾತನಾಡಿ
” ಆಮ್ ಆದ್ಮಿ ಪಾರ್ಟಿಯವರ ಚಿಹ್ನೆ ಪೊರಕೆ .ಇವತ್ತು ಅದೇ ಪೊರಕೆಯಿಂದಲೇ ದೆಹಲಿಯಲ್ಲಿ ಕೇಜ್ರಿವಾಲರ ಎ.ಎ.ಪಿ ಯನ್ನು ಮತದಾರರು ಗುಡಿಸಿಹೊರಹಾಕಿಗಿದ್ದಾರೆ.ಅರವಿಂದ ಕೇಜ್ರಿವಾಲರ ಭೃಷ್ಟಚ್ಚಾರವನ್ನು ಕಂಡ ಮತದಾರರು ಇಂದು ಅವರನ್ನು ಮನೆಗೆ ಕಳುಹಿಸುವ ಮೂಲಕ ಸರಿಯಾದ ಪಾಠವನ್ನು ಕಲಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರವೀಂದ್ರ ಉಳಿದೊಟ್ಟು, ಮಾಜಿ ಅಧ್ಯಕ್ಷ ಹರೀಶ್ ಕಂಜಿಲಿ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ,
ರಾಕೇಶ್ ರೈ ಕೆಡೆಂಜಿ,
ಸುಬೋದ್‌ ಶೆಟ್ಟಿ ಮೇನಾಲ, ಕುಸುಮಾಧರ ಎ.ಟಿ, ಆಶಾ ತಿಮ್ಮಪ್ಪ, ಆರ್.ಕೆ.ಭಟ್ ಕುರುಂಬಡೇಲು, ಶ್ರೀನಾಥ್ ರೈ ಬಾಳಿಲ, ಬುದ್ಧ ನಾಯ್ಕ, ವಿನಯಕುಮಾರ್ ಕಂದಡ್ಯ ಪ್ರದೀಪ್ ರೈ ಮನವಳಿಕೆ, ನಾರಾಯಣ ಎಸ್‌.ಎಂ, ಪುಷ್ಪಾ ಮೇದಪ್ಪ, ಅನೂಪ್‌ ಬಿಳಿಮಲೆ, ಹರೀಶ್ ಬೂಡುಪನ್ನೆ, ವಿಜಯ ಆಲಡ್ಕ ಶ್ರೀಕಾಂತ್ ಮಾವಿನಕಟ್ಟೆ, ಸುನಿಲ್ ಕೇರ್ಪಳ, ಪ್ರದೀಪ್ ಕೊಲ್ಲರಮೂಲೆ, ಶಂಕರಲಿಂಗಂ ತೊಡಿಕಾನ, ಸುದರ್ಶನ ಪಾತಿಕಲ್ಲು, ದೀರೇಶ್ ನಡುಬೈಲು, ಪ್ರಸಾದ್‌ ಕಾಟೂರು, ಹೇಮಂತ ಮಠ, ಅಶೋಕ್‌ ಅಡ್ಕಾರ್, ಅನಿಲ್ ಕೆ.ಸಿ., ದಿನೇಶ್ ನಾಯ‌ರ್, ಜಗನ್ನಾಥ ಜಯನಗರ, ಶಂಕ‌ರ್ ಪೆರಾಜೆ, ಅವಿನಾಶ್‌ ಕುರುಂಜಿ ಉಪಸ್ಥಿತರಿದ್ದರು.
ಪಟಾಕಿ ಸಿಡಿಸಿ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸಿದರು.