ನಗರ ಪಂಚಾಯತ್ ಕಸ, ಪಯಸ್ವಿನಿ ನದಿಯಲ್ಲಿ ಮೀನುಗಳು ಮಾರಣ ಹೋಮ

0

ಅರಮನೆಗಯ ಸೇತುವೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು

ತಾಲೂಕು ಕಚೇರಿಯಲ್ಲಿ ಫೆ. ೧೨ ರಂದು ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ದೂರು ನೀಡುವ ವಿಷಯದಲ್ಲಿ ಸುಳ್ಯ ನಗರ ಪಂಚಾಯತ್ ನ ಕಸದ ವಿಲೇವಾರಿಯಲ್ಲಿ ಅಸಮರ್ಪಕ ನಿರ್ವಹಣೆ ಕುರಿತು ಸದಸ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರು ದೂರು ನೀಡಿದ್ದಾರೆ.
೬೦ ರಿಂದ ೭೦ ಲಕ್ಷ ರೂ ಕಸ ವಿಲೇವಾರಿಗೆ ಬಳಸಿದ್ದು ಅಲ್ಲದೆ ಕಲ್ಚರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಬಳಿ ನಡೆಯುವ ಕೆಲಸಕ್ಕೆ ತಿಂಗಳಿಗೆ ೧.೨೫ ಲಕ್ಷ ಖರ್ಚು ಈ ಬಗ್ಗೆ ದೂರು ನೀಡಿದ್ದಾರೆ.
ಇತ್ತೀಚಿಗೆ ಸುಳ್ಯ ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ದೂರು ನೀಡಿದ್ದಾರೆ.

ಅರಮನೆ ಗಯ ಭಾಗದ ಜನರ ಬಹು ಬೇಡಿಕೆಯ ಸೇತುವೆ ನಿರ್ಮಾಣ ಇನ್ನೂ ಆಗದ ಕುರಿತು, ಹಾಗೂ ಮರ್ಕಂಜದ ತೇರ್ಥಮಜಲುನಲ್ಲಿ ಬಿಎಸ್‌ಎನ್‌ಎಲ್ ಸರಿಯಾಗಿ ಕಾರ್ಯಚರಿಸದೆ ಮತ್ತು ಅವ್ಯವಸ್ಥೆಯಿಂದ ಇರುವ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ನಿವಾಸಿ ಬಾಲಕೃಷ್ಣ ರವರು ದೂರು ನೀಡಿದರು.

ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆ ಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಈ ಮೊದಲು ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದುವರೆಗೂ ಯಾವುದೇ ಕ್ರಮ ವಹಿಸದ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದ್ದಾರೆ.

ಪೌತಿ ಖಾತೆ ವಿಷಯ ಕುರಿತು ಕೆಲವು ದೂರುಗಳು ಅದೇ ರೀತಿ ಗ್ರಾಮ ಪಂಚಾಯತ್ ನಲ್ಲಿ ನೀಡುವ ನೈನ್ ಲೆವೆನ್ ಸಮಸ್ಯೆ ಬಗ್ಗೆ ಕೆಲವರು ದೂರು ನೀಡಿದ್ದಾರೆ.

ಸುಳ್ಯ ತಾಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮದ ಕಡತದ ನಕಲು ಗಾಗಿ ನಿರಂತರವಾಗಿ ಮೂರು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆಂದು ಸಾರ್ವಜನಿಕರೊಬ್ಬರು ದೂರು ನೀಡಿದ ಘಟನೆಯು ನಡೆದಿದೆ.

ಈಗೆ ಇನ್ನೂ ಹಲವಾರು ದೂರುಗಳನ್ನು ಸಾರ್ವಜನಿಕರು ಲೋಕಾಯುಕ್ತಕ್ಕೆ ನೀಡಿದ್ದಾರೆ.