ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಗ್ಯಾರೇಜು, ಗಾರ್ಬಲ್, ಅಕ್ಕಿ, ಎಣ್ಣೆ ಮಿಲ್ ಗಳು, ಸಾಬೂನು ತಯಾರಿಕ ಘಟಕ, ಮರದ ಮಿಲ್, ಗೋಡಂಬಿ ಕಾರ್ಖಾನೆ, ಗಾರ್ಮೆಂಟ್ಸ್ ತಯಾರಿಕ ಘಟಕ ಹಾಗೂ ಇತರ ಕೈಗಾರಿಕೋದ್ಯಮ ಮಾಡುವ ಸ್ಥಳ ಮತ್ತು ಕಟ್ಟಡಗಳು ಭೂ ಪರಿವರ್ತನೆ ಆಗಿರಬೇಕು.
ಸುಳ್ಯ ನಗರ ಪಂಚಾಯತ್ ಹಾಲಿ ಉದ್ದಿಮೆ ಪರವಾನಗಿಯನ್ನು ಈ ನಿಯಮ ಪಾಲನೆಯಲ್ಲದ ರೀತಿಯಲ್ಲಿ ನೀಡಿರುತ್ತಾರೆ.
ನಗರ ಪಂಚಾಯತ್ 2025-26 ನೇ ಸಾಲಿನ ನಿರ್ಣಯದಂತೆ ಇನ್ನೂ ಮುಂದೆ ನಗರ ಪಂಚಾಯತ್ ಪರವಾನಗಿ, ನವೀಕರಣಕ್ಕೆ ಸಂಬಂಧಿಸಿದಂತೆ ಇಂತಹ ಉದ್ದಿಮೆಗಳಿಗೆ ಭೂಪರಿವರ್ತನೆ ಆಗಿರಬೇಕೆಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಗಳು ತಿಳಿಸಿದ್ದಾರೆ