
ಬೆಳ್ಳಾರೆ ಗ್ರಾಮದ ಬೀಡು ಪಾಟಾಜೆ ರಸ್ತೆ ತೀರಾ ಹದಗೆ್ಟ್ಟಿದ್ದು ರಸ್ತೆಯನ್ನು ಕೂಡಲೇ ಡಾಮರೀಕರಣಗೊಳಿಸದಿದ್ದಲ್ಲಿ ನಾಗರಿಕರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ನಿರಂತರ 16 ವರ್ಷಗಳಿಂದ ಇಲ್ಲಿಯ ರಸ್ತೆ ಡಾಮರೀಕರಣ ಎದ್ದು ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.









ಪೊಲೀಸ್ ಕ್ವಾಟ್ರಸ್ ಗೆ ,ನುರಾರು ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು
ಶಾಲಾ ಮಕ್ಕಳಿಗೂ ನಡೆದು ಹೋಗಲು ಸಮಸ್ಯೆಯಾಗಿದ್ದು ಕೂಡಲೇ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.

ಇಲ್ಲವಾದಲ್ಲಿ ಮುಂದಿನ ದಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದೆಂದು ನಾಗರಿಕರು ತಿಳಿಸಿದ್ದಾರೆ.










