ಹರಿಹರೇಶ್ವರ ದೇವಾಲಯದಲ್ಲಿ ಜಾತ್ರೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

0

ಧರ್ಮ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಭವಿಷ್ಯವನ್ನು ಉಜ್ವಲಗೊಳಿಸಿ; ಪದ್ಮನಾಭ ಜತ್ತಿಲ

ಸಮಾಜದಲ್ಲಿ ಇಂದು ಅವಿನಾಭಾವ ಸಂಬಂಧ ಕೊರತೆ ಎದ್ದು ಕಾಣುತ್ತಿದೆ, ಜನರಲ್ಲಿ ಪ್ರೀತಿ ವಿಶ್ವಾಸ ಕೊರತೆ ಕಾಣಿಸುತ್ತಿದೆ. ಯುವ ಜನಾಂಗ ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣರಾದ ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವಂತಾಗಬೇಕು ಎಂದು ಕೆ.ಪಿ.ಸಿ.ಸಿ ಬೆಂಗಳೂರು ರಾಜ್ಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ಇದರ ರಾಜ್ಯ ಕಾರ್ಯದರ್ಶಿ ಪದ್ಮನಾಭ ಜತ್ತಿಲ ನುಡಿದರು.

ಅವರು ಶ್ರೀ ಹರಿಹರೇಶ್ವರ ದೇವಾಲಯದ ಜಾತ್ರಾ ಮಹೋತ್ಸವದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತಿದ್ದರು.‌

ಮಾನವ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು ಎಂಬುದನ್ನು ಸನಾತನ ಸಂಸ್ಕೃತಿ ಪ್ರತಿನಿಧಿಸುತ್ತದೆ . ಧರ್ಮ ಸಂಸ್ಕೃತಿಗೆ ಪೂರಕವಾದ ಶಿಕ್ಷಣದೊಂದಿಗೆ ಶಿಕ್ಷಣವೂ ಇದ್ದರೆ ಆರ್ಥಿಕತೆ ಉಳಿಯುವಿಕೆ ಸಾಧ್ಯ. ಜೀವನದಲ್ಲಿ ಸೋತು ಗೆದ್ದರೆ ಮಾತ್ರ ಜೀವನದ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದ ಅವರು ಪಾಶ್ಚಾತ್ಯ ಸಂಸ್ಕೃತಿ ನಮ್ಮ ದೇಶಕ್ಕೆ ಮಾರಕವಾಗುತ್ತಿದೆ , ಸನಾತನ ಧರ್ಮವನ್ನು ಎತ್ತಿ ಹಿಡಿದು ಆ ಮೂಲಕ ಯುವಜನತೆ ಪ್ರೀತಿ ಬಾಂಧವ್ಯದ ಮುಖಾಂತರ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಧರ್ಮದ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡರೆ ಜೀವನವು ಸಂತೋಷಮಯವಾಗಿರುತ್ತದೆ ಎಂದರಲ್ಲದೆ . ಶ್ರೀರಾಮ ಕೇವಲ ತ್ರೇತಯುಗದ ಸ್ವತ್ತಲ್ಲ ಅಯೋಧ್ಯೆಗೆ ಮಾತ್ರ ಸೀಮಿತವಲ್ಲ. ಎಲ್ಲಾ ಕಾಲಕ್ಕೂ ಎಲ್ಲರಿಗೂ ಸೇರುವಂತಹ ಆದರ್ಶ ಅವನದ್ದು. ಹಾಗಾಗಿ ರಾಮಾಯಣ ಸಾರ್ವಕಾಲಿಕ ಎಂದರು.

ಸ್ಥಳೀಯ ಪ್ರತಿಭೆಗಳನ್ನು ಉದ್ದೇಶಿಸಿ ಪ್ರತಿಭೆಗಳು ಹುಟ್ಟುವುದು ಗುಡಿಸಲಿನಲ್ಲಿ ಸಾಯುವುದು ಅರಮನೆಯಲ್ಲಿ” ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಅಡಗಿರುವಂತಹ ಪ್ರತಿಭೆಗಳನ್ನು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯ ವೈಕರಿ ಶ್ಲಾಘನೀಯ ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ವಹಿಸಿದ್ದರು.
ವ್ಯವಸ್ಥಾಪನ ಸಮಿತಿಯ ಸದಸ್ಯರಾದ
ಚಂದ್ರಹಾಸ ಶಿವಾಲ ದೇವಳದ ಪಕ್ಷಿನೋಟದ ಬಗ್ಗೆ ಸಭೆಗೆ ತಿಳಿಸಿದರು.


ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಶಿವಾಲ ಶರತ್ ಡಿ ಎಸ್, ಭವಾನಿಶಂಕರ ಪೈಲಾಜೆ,ಆನಂದ ಕೆರೆಕ್ಕೋಡಿ, ಚಂದ್ರಶೇಖರ ಕಿರಿಭಾಗ, ರೇಷ್ಮಾ ಕಟ್ಟೆಮನೆ, ಜ್ಯೋತಿ ಕಳಿಗೆ, ಅಭಿವೃದ್ಧಿ ಸಮಿತಿಯ ಅದ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ ಉಪಸ್ಥಿತರಿದ್ದರು.


ಹರ್ಷಿತ ಎಲ್ಲಪಡ್ಕ ಪ್ರಾರ್ಥಿಸಿ, ಭವಾನಿಶಂಕರ ಪೈಲಾಜೆ ಸ್ವಾಗತಿಸಿ, ರೇಷ್ಮಾ ಕಟ್ಟೇಮನೆ ಧನ್ಯವಾದಗೈದರು.
ನಿತ್ಯಾನಂದ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು.