








ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ೩೨ ನೇ ವರ್ಷದ ಪ್ರತಿಷ್ಠಾ ವಾರ್ಷಿಕ ದುರ್ಗಾಪೂಜೆಯು ಫೆ.೨೧ರಂದು ನಡೆಯಿತು.

ಫೆ.೨೦ರಂದು ಗುರುವಾರ ಗಣಹೋಮ, ನಾಗತಂಬಿಲ, ಗುಳಿಗ ತಂಬಿಲ ನಡೆಯುವುದು. ಫೆ.೨೧ರಂದು ಮಧ್ಯಾಹ್ನ ಹೂವಿನ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನದಾನ, ರಾತ್ರಿ ಭಜನಾ ಕಾರ್ಯಕ್ರಮ, ಬಳಿಕ ಶ್ರೀ ದುರ್ಗಾಪೂಜೆ, ರಾತ್ರಿ ಮಹಾಪೂಜೆ, ದೇವಿ ಸೇವೆ ಬಳಿಕ ಪ್ರಸಾದ ವಿತರಣೆಯಾಗಿ ಅನ್ನದಾನ ನಡೆಯಿತು. ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮಿಯವರು ಎಲ್ಲರನ್ನು ಬರಮಾಡಿಕೊಂಡರು. ನೂರಾರು ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು.










