Home Uncategorized ಸುಬ್ರಹ್ಮಣ್ಯ: ಶ್ರೀ ಮಾರಿಯಮ್ಮ ಮತ್ತು ಪರಿವಾರ ದೈವಗಳ ವಾರ್ಷಿಕ ಮಹಾಪೂಜೆ

ಸುಬ್ರಹ್ಮಣ್ಯ: ಶ್ರೀ ಮಾರಿಯಮ್ಮ ಮತ್ತು ಪರಿವಾರ ದೈವಗಳ ವಾರ್ಷಿಕ ಮಹಾಪೂಜೆ

0

ಶ್ರೀ ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ಶ್ರೀ ಮಾರಿಯಮ್ಮಮತ್ತು ಪರಿವಾರ ದೈವಗಳ ವಾರ್ಷಿಕ ಮಹಾಪೂಜೆ ಫೆ.22 ಮತ್ತು ಫೆ.23 ರಂದು ನಡೆಯಿತು.

ಆ ಪ್ರಯುಕ್ತ ಶ್ರೀ ಮಹಾಗಣಪತಿ ಹೋಮ ನಡೆಯಿತು.
ಸಭಾ ಕಾರ್ಯಕ್ರಮ ನಡೆದಿದ್ದು ಸುಬ್ರಹ್ಮಣ್ಯ ಠಾಣೆಯ ಎಸ್ ಐ ಕಾರ್ತಿಕ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ ವಹಿಸಿದ್ದರು. ವೇದಿಕೆಯಲ್ಲಿ ರವಿ ಕಕ್ಕಪದವು, ಹರೀಶ್ ಇಂಜಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ಮೊಕ್ತೇಸರ ಹುಕ್ರ ದೋಣಿಮಕ್ಕಿ, ದೇವಿಯ ಪೂಜಾರಿ ಪಕೀರ ಕಾಶಿಕಟ್ಟೆ, ಕಾಯಕ ರತ್ನ ಪುರಸ್ಕೃತ ಸುಂದರ ಕೆ.ಬಿ,
ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಬೃಂದಾ, ಸಂಗೀತ, ಕ್ರೀಡಾ ಪಟು ಗೌತಮಿ, ಕಬ್ಬಡ್ಡಿ ಪಟು ಅಭಿಜಿತ್ ಅವರನ್ನು ಗೌರವಿಸಲಾಯಿತು. ರಾತ್ರಿ ನೃತ್ಯ ಸಂಭ್ರಮ ನಡೆಯಿತು ‌

NO COMMENTS

error: Content is protected !!
Breaking