ಕುಡಿಯುವ ನೀರು, ಸರ್ಕಾರಿ ಭೂಮಿ ಅತಿಕ್ರಮಣ, ನದಿ ಮಲೀನ, ಬಿಡಾಡಿ ಗೋವಿನ ತೊಂದರೆ, ಪ್ರಾಥಮಿಕ ಶಾಲೆಯ ಸ್ಥಳಾಂತರ, ಆರೋಗ್ಯ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ
ಸುಬ್ರಹ್ಮಣ್ಯ ಗ್ರಾ.ಪಂ ನ ಗ್ರಾಮ ಸಭೆ ಫೆ.27 ರಂದು ರಾಜೀವಗಾಂಧಿ ಸೇವಾಕೇಂದ್ರ ಕಟ್ಟಡದ ಕುಮಾರಧಾರ ಸಭಾಭವನದಲ್ಲಿ ನಡೆಯಿತು.









ಸಭೆ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಮೋದ್ ಇದ್ದರು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರುಗಳಾದ ವೆಂಕಟೇಶ್ ಎಚ್ ಎಲ್, ಶಿವರಾಮ ನೆಕ್ರಾಜೆ, ದಿಲೀಪ್, ನಾರಾಯಣ ಅಗ್ರಹಾರ, ಮೋಹನ ಗೌಡ ಕೋಟಿಗೌಡನ ಮನೆ, ಭಾರತಿ ದಿನೇಶ್, ಹರೀಶ್ ಇಂಜಾಡಿ, ಗಿರೀಶ್ ಆಚಾರ್ಯ, ಸವಿತಾ ಭಟ್, ಲಲಿತಾ ಗುಂಡಡ್ಕ, ಭವ್ಯ ಜೇನುಕೋಡಿ, ದಿವ್ಯ, ಪುಷ್ಪಲತಾ, , ಮಲ್ಲಿಕಾ, ಸೌಮ್ಯ, ಜಯಂತಿ,ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಪಾಲಾನ ವರದಿ ಪಾಲಿಸದಿರುವ ಗ್ಗೆ, ಸರ್ಕಾರಿ ಭೂಮಿ ಅತಿಕ್ರಮಣ, ನದಿ ಮಲೀನ, ಬಿಡಾಡಿ ಗೋವಿನ ತೊಂದರೆ, ಗೋ ಶಾಲೆ, ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆಯ ಸ್ಥಳಾಂತರ ಬಗ್ಗೆ, ಪುಟ್ ಪಾತ್ ಸಮಸ್ಯೆ, ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಯಿತು.










