ಸುಬ್ರಹ್ಮಣ್ಯ ಗ್ರಾಮ ಸಭೆಯಲ್ಲಿ ಗ್ತಾ.ಪಂ ಸದಸ್ಯರೊಬ್ಬರು ಮಾತಿಗೆ ವ್ಯಘ್ರರಾದ ಗ್ರಾಮಸ್ಥರು, ಧರಣಿ ನಡೆಸಿದ ಹಾಗೂ ಗ್ರಾ.ಪಂ ಸದಸ್ಯ ನಾರಾಯಣ ಅಗ್ರಹಾರ ಕ್ಷಮೆ ಕೇಳಿದ ಬಳಿಕ ಗ್ರಾಮ ಸಭೆ ಮುಂದುವರೆದ ಘಟನೆ ನಡೆದಿದೆ.










ಅಭಿವೃದ್ಧಿ ವಿಚಾರ ಚರ್ಚೆ ನಡೆದಾಗ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸದಸ್ಯ ಪವನ್ ಕುಮಾರ್ ಅವರನ್ನು ಉದ್ದೇಶಿಸಿ, ನಾರಾಯಣ ಅವರು ನೀವು ಮಾಸ್ಟರ್ ಪ್ಲಾನ್ ಸದಸ್ಯರಿದ್ದೀರಿ ಕುಮಾರಧಾರದಿಂದ ದೇವಾಲಯದವರೆಗೆ ನೀವೇನು ಅಭಿವೃದ್ಧಿ ಮಾಡಿಸಿದ್ದೀರಿ ಎಂದು ಕೇಳಿದರು. ಇದಕ್ಕುತ್ತರಿಸಿ ಪವನ್ ನಾನೀಗ ಹಿಂದಿನ ಗ್ರಾಮ ಸಭೆಯಲ್ಲಿ ಆದ ನಿರ್ಣಯಗಳು ಪಾಲನೆ ಆಗುತ್ತಿಲ್ಲ. ಯಾಕೆ ಎಂದು ಕೇಳುತಿದ್ದೇನೆ. ಅದನ್ನು ನೀವು ಯಾಕೆ ಪಾಲಿಸುವುದಿಲ್ಲ ಎಂದು ಕೇಳುತಿದ್ದೇನೆ ಎಂದರು, ಆ ವೇಳೆ ನೀವು ಮಾಸ್ಟರ್ ಪ್ಲಾನ್ ಸದಸ್ಯರು ನೀವು ಮಾಡಿಸಿ ಎಂದರು. ಆ ವೇಳೆ ನಾನು ಚುನಾಯಿತ ಪ್ರತಿನಿಧಿಯಲ್ಲ. ನಾಮ ನಿರ್ದೇಶಿತ ಮಾಸ್ಟರ್ ಪ್ಲಾನ್ ಸದಸ್ಯ,. ಗ್ರಾ.ಪಂ ಮಾಡುವುದು ಮೊದಲು ಮಾಡಿ ಎಂದರು. ಇದನ್ನೇ ಗಂಬೀರವಾಗಿ ತೆಗೆದುಕೊಂಡು ಅವರಿಬ್ಬರು ಚರ್ಚೆ ಮುಂದುವರೆಸಿದರು. ಒಂದು ಹಂತದಲ್ಲಿ ಬಾಯಿಗೆ ಬಾಯಿ ವಾಗ್ಯುದ್ದ ನಡೆದಾಗ ನಾರಾಯಣ ಅಗ್ರಹಾರ ಅವರು ನೀಮಗಾಗುವುದಾದ್ರೆ ಮಾಡಿಸಿ ಇಲ್ಲಾಂದ್ರೆ ಹೋಗಿ ಅಂದರು.
ಇದರಿಂದ ವ್ಯಘ್ರರಾದ ಪವನ್ ಕುಮಾರ್, ರವೀಂದ್ರ ಕುಮಾರ್ ರುದ್ರಪಾದ, ಕೃಷ್ಣಮೂರ್ತಿ, ಸತೀಶ್ ಕೂಜುಗೋಡು, ಮೋಹನ್ ದಾಸ್ ರೈ, ಕಿಶೋರ್ ಅರಂಪಾಡಿ, ವಿಮಲಾ ರಂಗಯ್ಯ, ಶೋಬಿತ್ ನಾಯರ್ ಮತ್ತಿತರರು ನಾರಾಯಣರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ವೇದಿಕೆಯ ಮುಂಬಾಗ ಧರಣಿ ಕೂತರು. ಗ್ರಾ.ಪಂ ಸದಸ್ಯ ಎಚ್ ಎಲ್ ವೆಂಕಟೇಶ್ ಕ್ಷಮೆ ಕೇಳಿದರಾದ್ರೂ ನಾರಾಯಣರು ಕ್ಷಮೆ ಕೇಳಬೇಕೆಂದು ಹಠ ಹಿಡಿದ ಬಳಿಕ ನಾರಾಯಣರು ಕ್ಷಮೆ ಕೇಳಿದರು. ಗ್ರಾಮ ಸಭೆ ಮುಂದುವರೆಯಿತು.










