ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್ ಪಡೆದ ವಾಯುಜಿತ್ ರೇಸಿಂಗ್ ಗೋ-ಕಾರ್ಟ್ ೭.೦ ಡಿಸೈನ್ ಚಾಲೆಂಜ್ (ಉಏಆಅ) seಚಿsoಟಿ ೧೨ ತಂಡಕ್ಕೆ ಅಭಿನಂದನಾ ಸಭೆಯು ಕಾಲೇಜಿನ ಆಡಳಿತ ಮಂಡಳಿ ಚೇರ್‌ಮೆನ್ ಕಮಿಟಿ ಬಿ ಎ.ಒ.ಎಲ್.ಇ(ರಿ) ಡಾ| ರೇಣುಕಾಪ್ರಸಾದ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ೨೭ ರಂದು ನಡೆಯಿತು.

ಅತಿಥಿಗಳಾಗಿ ಭಾಗವಹಿಸಿದ್ದ ಎನ್.ಎ. ರಾಮಚಂದ್ರ, ಮಾಜಿ ಅಧ್ಯಕ್ಷರು, ನಗರ ಪಂಚಾಯತ್, ಸುಳ್ಯ, ಸಂತೋಷ್ ಕುತ್ತಮೊಟ್ಟೆ, ಅದ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಆರಂತೋಡು, ತೊಡಿಕಾನ, ಶ್ರೀ ಸುಧಾಕರ ರೈ, ಅಧ್ಯಕ್ಷರು ಸುಳ್ಯ ವರ್ತಕರ ಸಂಘ ಮತ್ತು ಅಧ್ಯಕ್ಷರು, ರೆಡ್‌ಕ್ರಾಸ್ ಸೊಸೈಟಿ ಸುಳ್ಯ ತಾಲೂಕು , ಶಾಫಿ ಕುತ್ತಮೊಟ್ಟೆ, ಅಧ್ಯಕ್ಷರು, INTUC , ಸುಳ್ಯ ಇವರು ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್ ಪಡೆದ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.








ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ
ಡಾ. ಉಜ್ವಲ್ ಯು.ಜೆ. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಕಾಲೇಜಿನ ವಾಯುಜಿತ್ ರೇಸಿಂಗ್ ಗೋ-ಕಾರ್ಟ್‌ಗೆ ಉನ್ನತ ಕೌಶಲ್ಯ, ಮರು ಕೌಶಲ್ಯ ಮತ್ತು ಹೊಸ ತಂತ್ರಜ್ಞಾನದ ನವೀಕರಣ ಅಗತ್ಯ ಎಂದು ಹೇಳಿ ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್ ಗಳಿಸಿಕೊಂಡ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಾ ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಸುರೇಶ ವಿ. ರಾಷ್ಟ್ರಮಟ್ಟದ ಚಾಂಪ್ಯನ್‌ಶಿಪ್ ಪಡೆದ ವಾಯುಜಿತ್ ರೇಸಿಂಗ್ ಗೋ-ಕಾರ್ಟ್ ೭.೦ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಗೋ-ಕಾರ್ಟ್ ೭.೦ ಡಿಸೈನ್ ಚಾಲೆಂಜ್ (GKDC) season 12 ಇದರ ಮಾರ್ಗದರ್ಶಕರು ಪ್ರೊ. ಭರತ್ ಪಿ.ಯು ಮತ್ತು
ಪ್ರೊ. ರಾಘವೇಂದ್ರ ಬಿ. ಕಾಮತ್ ವಿಭಾಗ ಮುಖ್ಯಸ್ಥರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಇವರನ್ನು ಸನ್ಮಾನಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಗೋ-ಕಾರ್ಟ್ ರೇಸಿಂಗ್ ಟೀಮ್‌ನ ಲೀಡರ್ ಜಯರಾಜ್ ಹಾಗೂ ತಂಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಭರತ್ ಪಿ.ಯು ಗೋ-ಕಾರ್ಟ್‌ನ ಇತಿಹಾಸ ಮತ್ತು ಬೇರೆ ಬೇರೆ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು. ಗೋ-ಕಾರ್ಟ್ 7.೦ ಡಿಸೈನ್ ಬಗ್ಗೆ ತಂಡದ ಲೀಡರ್ ಜಯರಾಜ್ ಮಾಹಿತಿ ನೀಡಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ನಿಶ, ಧನ್ಯಶ್ರೀ ಹಾಗೂ ಜೀವಿತ ಪ್ರಾರ್ಥಿಸಿ, ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ಕೆ. ಸ್ವಾಗತಿಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಅಭಿಜ್ಞ ಬಿ.ಬಿ. ವಂದಿಸಿದರು ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಪ್ರಾಧ್ಯಾಪಕರುಗಳಾದ ಪ್ರೊ. ನಸೀಮ ಸಿ.ಎ ಮತ್ತು ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಆಶ್ರಿತ ಕೆ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಶ್ರೀ ನಾಗೇಶ್ ಕೊಚ್ಚಿ ಮತ್ತು ವಿದ್ಯಾರ್ಥಿವೃಂದ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.










