ನಮ್ಮ ಸಹಕಾರಿ ಭಾರತಿ ತಂಡ ನ್ಯಾಯಾಲಯದ ಮೊರೆ ಹೋಗಿಲ್ಲ

0

ಯಾರಿಗೂ ಮತದಾನದ ಹಕ್ಕನ್ನು ಕೋರಿರುವುದಿಲ್ಲ

ಅಪಪ್ರಚಾರಕ್ಕೆ ನಾವು ಹೊಣೆಯಲ್ಲ, ಮುಂದೆ ಕಾನೂನು ಹೋರಾಟ ಮಾಡ್ತೇವೆ

ಸುಬ್ರಹ್ಮಣ್ಯದಲ್ಲಿ ಕೊಲ್ಲಮೊಗ್ರು ಹರಿಹರ ಸೊಸೈಟಿಯ ನಿಯೋಜಿತ ನಿರ್ದೇಶಕರಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ದ ಚುನಾವಣೆಯಲ್ಲಿ ಸಹಕಾರಿ ಭಾರತಿ ತಂಡ ನ್ಯಾಯಾಲಯದ ಮೊರೆ ಹೋಗಿಲ್ಲ, ಯಾವುದೇ ಮತ್ತು ಯಾರಿಗೂ ಮತದಾನದ ಹಕ್ಕನ್ನು ಕೋರಿರುವುದಿಲ್ಲ ಎಂದು ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಹಕಾರ ಭಾರತಿ ತಂಡದಿಂದ ನಿರ್ದೇಶಕರಾಗಿ ಆಯ್ಕೆಯಾದವರು ಫೆ.26 ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ. ಸಂಘ ಸಿದ್ಧಪಡಿಸಿದ ಅರ್ಹ ಮತದಾರರ ಅಂತಿಮ ಪಟ್ಟಿಯ ಅನ್ವಯ ಚುನಾವಣೆಯಲ್ಲಿ ಸ್ಪರ್ಧಿಸಿರುತ್ತೇವೆ . ಪ್ರಸಕ್ತ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಇತರೆ ತಂಡಗಳ ಪರವಾಗಿ ಪರಮೇಶ್ವರ ಹಾಗೂ ಕುಶಾಲಪ್ಪಗೌಡ ಇವರು ಉಚ್ಚ ನ್ಯಾಯಾಲಯದಲ್ಲಿ ಮತದಾನದ ಹಕ್ಕನ್ನು ಕೋರಿ ಸಲ್ಲಿಸಿದ ಮನವಿಯಂತೆ ಮತದಾನದ ಹಕ್ಕನ್ನು ಪಡೆಯಲಾಗಿ ಫಲಿತಾಂಶ ಘೋಷಣೆಯನ್ನು ತಡೆಹಿಡಿಯಲಾಗಿರುತ್ತದೆ‌. ಸದ್ರಿ, ಕುಶಾಲಪ್ಪ ಗೌಡ ಮತ್ತು ಇತರೆ ಸದಸ್ಯರು ನ್ಯಾಯಾಲಯದಿಂದ ಪಡೆದಿರುವ ಕೆಲವು ಸದಸ್ಯರ ಮತದಾನದ ಹಕ್ಕನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮರು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗದೆ ನೂತನ ಆಡಳಿತ ಮಂಡಳಿ ರಚನೆ ಆ ಆಗದಿರುತ್ತದೆ.

ಆದ್ದರಿಂದ ಈಗಾಗಲೇ ಹಣಕಾಸಿನ ವರ್ಷ ಕೊನೆಯಾಗುತ್ತಿದ್ದು ಮಾರ್ಚ್ ತಿಂಗಳಲ್ಲಿ ಸದಸ್ಯರಿಗೆ ಎಲ್ಲಾ ತರದ ಸಾಲ ಸೌಲಭ್ಯ ಒದಗಿಸುವಲ್ಲಿ ಮತ್ತು ಸಾಲದ ಮರುಪಾವತಿ ಹಂತದಲ್ಲಿ
ಆಡಳಿತ ಮಂಡಳಿಯ ಗಣಪತಿಯಿಂದ ಅನಾನುಕೂಲವಾಗಿರುವುದರಿಂದ ಸಂಘದ ಸದಸ್ಯರಿಗೆ ಈ ವ್ಯವಹಾರದಲ್ಲಿ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಮೂಲಕ ಸಹಕಾರ ಭಾರತ ಬೆಂಬಲಿಸಿ ತಂಡವಾಗಿ ಸ್ಪರ್ಧಿಸಿರುವ ನಾವು ನ್ಯಾಯಾಲಯದಲ್ಲಿ ಯಾವುದೇ ಹೆಚ್ಚುವರಿ ಮತದಾನದ ಹಕ್ಕನ್ನಾಗಲಿ ಅಥವಾ ನ್ಯಾಯಾಲಯದಲ್ಲಿ ನೀಡಲ್ಪಟ್ಟ ಮತದಾನದ ಹಕ್ಕನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಯಾವುದೇ ಓಡಿರುವುದಿಲ್ಲ ಹಾಗೂ ಫಲಿತಾಂಶ ಘೋಷಣೆ ಮತ್ತು ಆಡಳಿತ ಮಂಡಳಿ ರಚನೆಯಾಗುವಲ್ಲಿ ಆಗ ವಿಳಂಬವಾದಲ್ಲಿ ನಮ್ಮ ತಂಡದ ಪಾಲ್ಗೊಳ್ಳುವಿಕೆ ಇರುವುದಿಲ್ಲ ಈ ಕುರಿತಾದ ಯಾವುದೇ ತಪ್ಪು ಸಂದೇಶಗಳು ಸದಸ್ಯರಿಗೆ ರವಾನೆಯಾಗಿದ್ದಲ್ಲಿ ಹಾಗೂ ಈಗಾಗಲೇ ತಪ್ಪು ಸಂದೇಶಗಳು ರವಾನೆಯಾಗಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಅಂತಹ ಸಂದೇಶಗಳು ಸದಸ್ಯರಿಗೆ ರವಾನೆಗಾಗಿದ್ದಲ್ಲಿ ಹಾಗೂ ಈಗಾಗಲೇ ತಪ್ಪು ಸಂದೇಶಗಳು ರವಾನೆಯಾಗಿರುವುದು ನಮಗೆ ಬಂದಿರುವುದರಿಂದ ಅಂತ ಸಂದೇಶಗಳು ಅದು ನಂಬಲಾರ್ಹವಾದ ಮಾಹಿತಿಯಾಗಿರುವುದಿಲ್ಲ.


ಇದನ್ನು ಸಂಘದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಮಾಧ್ಯಮದ ಮೂಲಕ ಸ್ಪಷ್ಟಪಡಿಸುತ್ತೇವೆ ಹಾಗೂ ಆಕ್ಷೇಪಣೆ ಸಲ್ಲಿಸದ ಸದಸ್ಯರಲ್ಲೂ ಕೂಡ ಸಂಘದ ವ್ಯವಹಾರಗಳಿಗೆ ತೊಡಕಾಗದಂತೆ ಮತ್ತು ಸಂಘದ ಸದಸ್ಯರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ಮಾಧ್ಯಮದ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಹಾಗೂ ಫೆ.28 ರ ಜಡ್ಜ್ ಮೆಂಟ್ ಮುಂದೆ ಕಾನೂನು ಹೋರಾಟಕ್ಕೆ ತಯಾರಾಗುತ್ತೇವೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಭಟ್ ಇಡ್ಯಕ್ಕ, ಶೇಷಪ್ಪ ಗೌಡ ಕಿರಿಭಾಗ, ಡಾl ಸೋಮಶೇಖರ ಕಟ್ಟೆಮನೆ, ಹಿಮ್ಮತ್ ಕೆ.ಸಿ, ರೇಗನ್ ಶೆಟ್ಯಡ್ಕ, ಕಮಲಾಕ್ಷ ಮುಳ್ಳುಬಾಗಿಲು, ಡ್ಯಾನಿ ಯಲದಾಳು, ವೇದವಾತಿ ಮುಳ್ಳುಬಾಗಿಲು, ಮೇನಕ ಕೊಪ್ಪಡ್ಕ ಉಪಸ್ಥಿತರಿದ್ದರು.