ಕೂರಲೂ ಸಾಧ್ಯವಾಗ್ತಾ ಇಲ್ಲ…
ಗ್ರಾಮ ಸಭೆಯಲ್ಲಿ ಅಳಲು ತೋಡಿಕೊಂಡ ಗ್ರಾಮ ಲೆಕ್ಕಾಧಿಕಾರಿ
ಏನೆಕಲ್ಲು ಗ್ರಾಮದ ಲೆಕ್ಕಾಧಿಕಾರಿ ಕಛೇರಿಗೆ ಕರೆಂಟ್ ಸಪೈ ಕಟ್ ಮಾಡಲಾಗಿದೆ ವ್ಯವಸ್ಥೆ ಗೊಳಿಸಿ ಎಂದು ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಸುಬ್ರಹ್ಮಣ್ಯ ಗ್ರಾಮ ಸಭೆಯಲ್ಲಿ ಅಳಲು ತೋಡಿಕೊಂಡರು.









ಎರಡು ತಿಂಗಳಿನಿಂದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಸುಬ್ರಹ್ಮಣ್ಯ ಗ್ರಾ.ಪಂ ವಿದ್ಯುತ್ ಬಿಲ್ ಕಟ್ಟದಿರುವ ಕಾರಣ ಈ ಸಮಸ್ಯೆ. ದಯವಿಟ್ಟು ಬಿಲ್ ಪಾವತಿಸಿ ಎಂದು ಆಗ್ರಹಿಸಿದರು. ಈಗ ಬೇಸಿಗೆಯಾದ ಕಾರಣ ಅಲ್ಲಿ ಕೂರಲಾಗ್ತಿಲ್ಲ. ಕಟ್ಟಡವೂ ಶಿಥಿಲಗೊಂಡಿದೆ ಎಂದು ಕೇಳಿಕೊಂಡರು.










