ಶಾಲಾ ಜಾಗ, ರಸ್ತೆ ಅತಿಕ್ರಮಣ ಮತ್ತಿತರ ವಿಷಯದ ಬಗ್ಗೆ ಚರ್ಚೆ
ಕಳಂಜ ಗ್ರಾ.ಪಂ ನ ಗ್ರಾಮ ಸಭೆ ಫೆ.28 ರಂದು ಪಂಡಿತ್ ದೀನ್ ದಯಾಳ್ ಸಮುದಾಯ ಭವನ ಅಯ್ಯನಕಟ್ಟೆ ಯಲ್ಲಿ ಫೆ. 28 ರಂದು ನಡೆಯಿತು.
















ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ವಹಿಸಿದ್ದರು. ನೊಡೆಲ್ ಅಧಿಕಾರಿಯಾಗಿ ಯುವಜನಾ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಇದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಲತಾ, ಗ್ರಾ.ಪಂ ಸದಸ್ಯರುಗಳಾದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಗಣೇಶ್ ರೈ, ಶ್ರೀಮತಿ ಕಮಲ ಉಪಸ್ಥಿತರಿದ್ದರು. ಪಿಡಿಒ ಶ್ರೀಮತಿ ಗೀತಾ ವೇದಿಕೆಯಲ್ಲಿದ್ದು ವರದಿ ವಾಚಿಸಿದರು. ಗ್ರಾ.ಪಂ ಸಿಬ್ಬಂದಿ ಗಿರಿಧರ ಸ್ವಾಗತಿಸಿದರು. ಪಿಡಿಒ ವಂದಿಸಿದರು.
ಸಭೆಯಲ್ಲಿ ಅಯ್ಯನಕಟ್ಟೆ ಶಾಲಾ ಜಾಗ, ಅಂಗನವಾಡಿ, ಸಾರ್ವಜನಿಕ ಸ್ಥಳದಲ್ಲಿ ಕಸ ಉರಿಸುವ ಬಗ್ಗೆ, ರಸ್ತೆ ಅತಿಕ್ರಮಣ ಬಗ್ಗೆ ಚರ್ಚೆ ನಡೆಯಿತು.










