ಫೆಬ್ರವರಿ 27ರಂದು ರೋಟರಿ ವಿದ್ಯಾ ಸಂಸ್ಥೆಗೆ ಡಿಸ್ಟ್ರಿಕ್ಟ್ ಗವರ್ನರ್ ರೊ.ವಿಕ್ರಮ್ ದತ್ತ ಅಧಿಕೃತ ಭೇಟಿ ನೀಡಿ, ಶಾಲಾ ಇಂಟ್ರ್ಯಾಕ್ಟ್ ಕ್ಲಬ್ ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.









ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಯೋಗಿತಾ ಗೋಪಿನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಗವರ್ನರ್ ರೊ.ವಿಕ್ರಮ್ ದತ್ತ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬರುವ ಎಲ್ಲಾ ಸೋಲುಗಳನ್ನು ಎದುರಿಸಬೇಕು. ವಿಶಿಷ್ಟವಾಗಿ ಯೋಚಿಸಿ ಗುರಿ ತಲುಪಬೇಕು ಎಂದು ಉಪನ್ಯಾಸ ನೀಡಿದರು.
ವಿದ್ಯಾ ಸಂಸ್ಥೆಯ ಸಂಚಾಲಕರಾದ ರೊ. ಪ್ರಭಾಕರನ್ ನಾಯರ್ ಶುಭ ಹಾರೈಸಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರೊ. ವಿನಯ್ ಕುಮಾರ್ , ರೋಟರಿ ಕ್ಲಬ್ ಕಾರ್ಯದರ್ಶಿ ರೊ. ಡಾlಹರ್ಷಿತಾ ಪುರುಷೋತ್ತಮ್, ಕೋಶಾಧಿಕಾರಿ ರೊ.ಹರಿರಾಯ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ರೊ. ಮಧುಸೂದನ್ ಕುಂಭಕೋಡು, ರೊ.ದಯಾನಂದ ಆಳ್ವ , ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಇಂಟ್ರ್ಯಾಕ್ಟ್ ನಿಯೋಜಿತ ಅಧ್ಯಕ್ಷ ದಿಗಂತ್ ಕಲ್ಲುಗದ್ದೆ, ನಿಯೋಜಿತ ಕಾರ್ಯದರ್ಶಿ ಹಂಸಿಕಾ ಕೆ.ಎಲ್. ವೇದಿಕೆಯಲ್ಲಿ ಆಸೀನರಾಗಿದ್ದರು.

ರೋಟರಿ ಕ್ಲಬ್ ಪೂರ್ವಾಧ್ಯಕ್ಷರು,ವಿದ್ಯಾ ಸಂಸ್ಥೆಗಳ ಪೂರ್ವ ಸಂಚಾಲಕರು, ರೋಟೇರಿಯನ್ಸ್,ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .ಇಂಟ್ರ್ಯಾಕ್ಟ್ ಇನ್ಚಾರ್ಜ್ ಶಿಕ್ಷಕರಾದ ಶ್ರೀಹರಿ ಪೈಂದೋಡಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.
ವಿದ್ಯಾರ್ಥಿನಿಯರಾದ ಕು.ನಿರೀಕ್ಷಾ, ಕು.ಗಾನವಿ, ಕು.ವಂದಿತಾ ಪ್ರಾರ್ಥಿಸಿದರು.
ಕು.ಭೂಮಿಕಾ. ಕೆ.ವಿ ಸ್ವಾಗತಿಸಿದರು,
ಕು. ಮನುಜ್ಞಾ ವಂದಿಸಿದರು. ವಿದ್ಯಾರ್ಥಿನಿ ಕು.ಶ್ರೀದುರ್ಗಾ ಹಾಗೂ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.










