ಕೊಲ್ಲಮೊಗ್ರು: ಗ್ರಾಮ ಸಭೆಗೆ ಬಾರದ ಗ್ರಾಮಸ್ಥರು

0

ಕೋರಂ ಕೊರತೆಯ ಕಾರಣದಿಂದ ಗ್ರಾಮ ಸಭೆ ರದ್ದು

ಮಾರ್ಚ್ 15 ಕ್ಕೆ ಗ್ರಾಮ ನಡೆಸಲು ನಿರ್ಧಾರ

ಕೊಲ್ಲಮೊಗ್ರು ಗ್ರಾ.ಪಂ ನ ಗ್ರಾಮ ಸಭೆ ಇಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಲಿತ್ತು. ಸಭೆ ಆರಂಭಕ್ಕೆ ಕೋರಂ ಇಲ್ಲದೆ ಸಭೆ ನಡೆಸಲು ಆಕ್ಷೇಪ ವ್ಯಕ್ತವಾಗಿ ಸಭೆ ರದ್ದುಗೊಂಡ ಘಟನೆ ವರದಿಯಾಗಿದೆ.

ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೋಹಿನಿ ಕಟ್ಟ ಅವರ ಅಧ್ಯಕ್ಷೆಯಲ್ಲಿ ಗ್ರಾಮ ಸಭೆ ಆರಂಭವಾದಾಗ ಪ್ರದೀಪ್ ಕುಮಾರ್ ಕೆ.ಎಲ್ ಅವರು 3700 ಗ್ರಾಮಸ್ಥರಿರುವ ಕೊಲ್ಲಮೊಗ್ರು ಗ್ರಾ‌ ಪಂ ವ್ಯಾಪ್ತಿಯಲ್ಲಿ ಗ್ರಾಮ ಸಭೆಯಲ್ಲಿ ಜನರಿಲ್ಲ. ಕನಿಷ್ಠ 200 ಗ್ರಾಮಸ್ಥರಿರಬೇಕು,ಇಲ್ಲಿ ಕೋರಂ ಇಲ್ಲ ಮತ್ತೆ ಹೇಗೆ ಗ್ರಾಮ ಸಭೆ ಮಾಡುತ್ತಿರಿ? ಎಂದು ಕೇಳಿದರು. ಕೊನೆಗೆ ಅರ್ಧ ಗಂಟೆ ಕಾಯಲಾಗಿ ಗ್ರಾಮ ಸಭೆ ರದ್ದುಗೊಳಿಸಲಾಯಿತು.


ಮುಂದೆ ಮಾರ್ಚ್ 15 ನೇ ತಾರೀಕಿನಂದು ಗ್ರಾಮ ಸಭೆ ಮಾಡುವುದಾಗಿ ಗ್ರಾ.ಪಂ ಅಧ್ಯಕ್ಷೆ ಪ್ರಕಟಿಸಿದರು.
ಸಭೆಗೆ ಎಂಟು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
.
ಗ್ರಾ.ಪಂ ಉಪಾಧ್ಯಕ್ಷ ಮಾದವ ಚಾಂತಾಳ, ಸದಸ್ಯರುಗಳಾದ ಪುಷ್ಪರಾಜ್ ಪಡ್ಪು, ಅಶ್ವಥ್ ಯಲದಾಳು, ಬಾಲಸುಬ್ರಹ್ಮಣ್ಯ ಭಟ್, ಶ್ರೀಮತಿ ಜಯಶ್ರೀ ಚಾಂತಾಳ, ಶ್ರೀಮತಿ ಶಿವಮ್ಮ ವೇದಿಕೆಯಲ್ಲಿದ್ದರು. ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ ಉಪಸ್ಥಿತರಿದ್ದರು. ‌