ರೋಟರಿ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

0

ಫೆಬ್ರವರಿ 27 ರಂದು ರೋಟರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಪ್ರತಿಭಾನ್ವಿತ
ವಿಜ್ಞಾನ ಶಿಕ್ಷಕರಾದ ಶ್ರೀಮತಿ ಶ್ರೀಮತಿ ಶಾಲಿನಿ ರಾಮಕೃಷ್ಣ ಅನೇಕ ವಿಜ್ಞಾನಿಗಳು ಹಾಗೂ ಅವರ ಸಂಶೋಧನೆಯ ಬಗ್ಗೆ ತಿಳಿಸುತ್ತಾ, ವಿಜ್ಞಾನ ದಿನಾಚರಣೆಯ ಮಹತ್ವವನ್ನು ವರ್ಣಿಸಿ, ಸರ್.ಸಿ.ವಿ.ರಾಮನ್ ರವರು ಬೆಳಕಿನ ಚದುರುವಿಕೆಯ ಬಗ್ಗೆ ನಡೆಸಿದ ಅನ್ವೇಷಣೆ ಹಾಗೂ ಪೈಲೆಟ್ ಆಗ ಬಯಸಿದ್ದ ಅಬ್ದುಲ್ ಕಲಾಂ ರವರು ಹೇಗೆ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಆಗಿ, ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಅನುಪಮ ಸೇವೆ ನೀಡುತ್ತಾ, ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು ಹಾಗೂ ಅವರ ಸಾಧನೆಗಳನ್ನು ವರ್ಣಿಸಿ ಮಕ್ಕಳು ಉನ್ನತ ಕನಸು ಕಂಡು ನನಸಾಗಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.


ಮತ್ತೋರ್ವ ಪ್ರತಿಭಾವಂತ ಶಿಕ್ಷಕರಾರ ಜಿತೇಶ್ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಶಿಕ್ಷಕಿಯರಾದ ಶ್ರೀಮತಿ ಚಂದ್ರಕಲಾ ಡಿ. , ಶ್ರೀಮತಿ ಜಯಶ್ರೀ ಕೆ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.