








ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯು ಡಾ. ದಯಾನಂದ ಪೈ ಸತೀಶ್ ಪೈ ಮೆಮೋರಿಯಲ್ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಫೆ.28ರಂದು ನಡೆಯಿತು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ನಾಯಕನಾಗಿ ಮನೀಶ್ ರೈ ನಾವೂರು ಅಂತಿಮ ಬಿ. ಕಾಮ್, ತಿಲಕೇಶ್ ಕೆ ಆರ್ ಕಲ್ಲುಗುಂಡಿ ಅಂತಿಮ ಬಿ. ಕಾಮ್, ಅಮೃತ ಟಿ ಎಸ್ ಕಲ್ಲುಗುಂಡಿ ಪ್ರಥಮ ಬಿ. ಎ , ಅಮೂಲ್ಯ ಎ. ಕೆ ಜಟ್ಟಿಪಳ್ಳ ದ್ವಿತೀಯ ಬಿ. ಕಾಮ್ , ಪ್ರೀತೇಶ್ ಎ ವಿ ಕಲ್ಲುಗುಂಡಿ ಅಂತಿಮ ಬಿ. ಕಾಮ್ ಭಾಗವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲರಾದ ಸತೀಶ್ ಕುಮಾರ್ ಕೆ ಆರ್ ಮಾರ್ಗದರ್ಶನ ನೀಡಿದ್ದರು.










