ಸುಳ್ಯ ಲ್ಯಾಂಪ್ ಸೊಸೈಟಿ ಚುನಾವಣೆ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

0

ಸುಳ್ಯದ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶದ ಸಹಕಾರ ಸಂಘದ ಚುನಾವಣೆ ಮಾರ್ಚ್ 1ರಂದು ಸುಳ್ಯದ ಗಿರಿದರ್ಶಿನಿ ಸಭಾಂಗಣದಲ್ಲಿ ನಡೆದಿದ್ದು, ಮತ ಎಣಿಕೆ ಬಳಿಕ ಕಾಂಗ್ರೆಸ್ ನಾಯಕರಿಂದ ವಿಜಯೋತ್ಸವ ನಡೆಯಿತು.
ಕಾಂಗ್ರೆಸ್ ಬೆಂಬಲಿತ ವಿಜೇತ ಅಭ್ಯರ್ಥಿಗಳಾದ ಮಾಧವ ದೇವರಗದ್ದೆ ಸುಬ್ರಹ್ಮಣ್ಯ, ನೀಲಮ್ಮ ಕಣಿಪ್ಪಿಲ ಅಮರಪಡ್ನೂರು, ಕು. ಜಸ್ಮಿತಾ ಬೆಳ್ಳಾರೆ, ಜ್ಯೋತಿಕಾ ಗುತ್ತಿಗಾರು ಇವರನ್ನು ಹಾರ ಹಾಕಿ ಅಭಿನಂದಿಸಲಾಯಿತು. ಕಾಂಗ್ರೆಸ್ ನಾಯಕ ಪ್ರವೀಣ್ ಮುಂಡೋಡಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಗೋಕುಲ್ ದಾಸ್ ಸುಳ್ಯ, ಬೋಜಪ್ಪ ನಾಯ್ಕ, ಭವಾನಿಶಂಕರ ಕಲ್ಮಡ್ಕ, ವಿಮಲಾಕ್ಷಿ, ಪರಮೇಶ್ವರ ಕೆಂಬಾರೆ ಮತ್ತಿತರರು ಉಪಸ್ಥಿತರಿದ್ದರು