ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಕುಕ್ಕುಜಡ್ಕ ಘಟಕದ ವಾರ್ಷಿಕ ಮಹಾಸಭೆ

0

ಅಧ್ಯಕ್ಷ -ಸತೀಶ್ ಪಿಲಿಕಜೆ, ಕಾರ್ಯದರ್ಶಿ-ಪುನೀತ್ ಸಂಕೇಶ,ಸಂ.ಕಾರ್ಯದರ್ಶಿ ವಿನಯ್ ಪಾಡಾಜೆ

ಸುಳ್ಯ ತಾಲೂಕು ಅಟೋ ಚಾಲಕರ ಸಂಘದ ಬಿ.ಎಮ್.ಎಸ್ ಸಂಯೋಜಿತ ಕುಕ್ಕುಜಡ್ಕದ
ಶ್ರೀ ಮಹಾವಿಷ್ಣು ಘಟಕದ ವಾರ್ಷಿಕ ಮಹಾಸಭೆಯು
ಮಾ. 05 ರಂದು ಕುಕ್ಕುಜಡ್ಕ ಮಹಾವಿಷ್ಣು ದೈವಸ್ಥಾನದ ವಠಾರದಲ್ಲಿ‌ ನಡೆಯಿತು.

ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷರು, ಬಿ.ಎಮ್.ಎಸ್ ಸೇವಾ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದೀಪ ಪ್ರಜ್ವಲಿಸಿ ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ
ಬ್ಯಾಂಕ್ ಆಫ್ ಬರೋಡಾ ಕುಕ್ಕುಜಡ್ಕ ಶಾಖೆಯ ಮೆನೇಜರ್ ರಾಕೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸತೀಶ್ ಪಿಲಿಕಜೆ, ಕಾರ್ಯದರ್ಶಿ ಪುನೀತ್ ಸಂಕೇಶ, ಸಂಘಟನಾ ಕಾರ್ಯದರ್ಶಿ ವಿನಯ್ ಪಾಡಾಜೆ, ನಿರ್ದೇಶಕರಾಗಿ ಹರೀಶ್ ಕೊರತ್ಯಡ್ಕ ರವರನ್ನು ಆಯ್ಕೆ ಮಾಡಲಾಯಿತು.
ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್,ಸುಳ್ಯ ಬಿ.ಎಮ್.ಎಸ್ ಪ್ರ. ಕಾರ್ಯದರ್ಶಿ ನಾರಾಯಣ ಎಸ್. ಎಮ್, ಕೋಶಾಧಿಕಾರಿ ರವಿ ಜಾಲ್ಲೂರು,
ಘಟಕದ ಸದಸ್ಯರು ಉಪಸ್ಥಿತರಿದ್ದರು.
ಕು.ನಿರೀಕ್ಷಾ ಬಿ.ಸಿ ಪ್ರಾರ್ಥಿಸಿದರು.
ಚಂದ್ರಶೇಖರ ಚೊಕ್ಕಾಡಿ‌ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.