ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದಲ್ಲಿ ಇಂದು ಪ್ರತಿಷ್ಠಾ ದಿನಾಚರಣೆ – ಶ್ರೀ ದೈವಗಳಿಗೆ ನೂತನ ಪಲ್ಲಕ್ಕಿ ಸಮರ್ಪಣೆ

0

ಹರ್ಷಕುಮಾರ್ ಮುಂಡೋಡಿ ಮತ್ತು ಮನೆಯವರಿಂದ ನೂತನ ಪಲ್ಲಕ್ಕಿ ಕೊಡುಗೆ

ಮಾ.14, 15ರಂದು ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ

ಇತಿಹಾಸ ಪ್ರಸಿದ್ದ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದಲ್ಲಿ ಜಾತ್ರೋತ್ಸವವು ಮಾ. 14 ಮತ್ತು 15ರಂದು ನಡೆಯಲಿದೆ.

ಇಂದು (ಮಾ. 9) ದೈವಸ್ಥಾನದಲ್ಲಿ ನಾಗ ತಂಬಿಲ, ಪ್ರತಿಷ್ಠಾ ದಿನಾಚರಣೆ, ನೂತನ ಪಲ್ಲಕ್ಕಿ ಸಮರ್ಪಣೆ ನಡೆಯಿತು.

ಕಂದ್ರಪ್ಪಾಡಿ ಜಾತ್ರೋತ್ಸವದಲ್ಲಿ ಮಾಳಿಗೆಯಿಂದ ರಾತ್ರಿ ಭಂಡಾರ ಬರುವುದೇ ವಿಶೇಷವಾಗಿರುತ್ತದೆ. ಅಂದು ಪ್ರಾಥ ಕಾಲ ರಾಜ್ಯ ದೈವದ ನೇಮ ನಡೆದು ಬೆಳಗ್ಗಿನಿಂದ ದೈವಗಳ ನೆಮೋತ್ಸವ ನಡೆಯುತ್ತದೆ.

ಈಗ ಸುಮಾರು 60 ವರ್ಷಕ್ಕೂ ಹಿಂದಿನಿಂದ ಇದ್ದ ಪಲ್ಲಕ್ಕಿಯಲ್ಲಿ ಶ್ರೀ ದೈವಗಳ ಮೂರ್ತಿಗಳನ್ನು ಇರಿಸಿ ಭಂಡಾರ ಸಮೇತವಾಗಿ ಮಾಳಿಗೆ (ದೈವಸ್ಥಾನ)ದಿಂದ ಕಂದ್ರಪ್ಪಾಡಿ ಜಾತ್ರೋತ್ಸವ ನಡೆಯುವ ಸ್ಥಳ (ಮಾಡ)ಕ್ಕೆ ಸುಡುಮದ್ದು, ವಾದ್ಯ ಘೋಷಣೆಗಳೊಂದಿಗೆ ತರಲಾಗುತ್ತದೆ. ಈ ಬಾರಿ ದೈವಸ್ಥಾನಕ್ಕೆ ಹರ್ಷಕುಮಾರ್ ಮುಂಡೋಡಿ ಯವರು ನೂತನ ಪಲ್ಲಕ್ಕಿಯನ್ನು ಕೊಡುಗೆ ನೀಡಿದ್ದಾರೆ. ಈ ಬಾರಿಯ ಜಾತ್ರೋತ್ಸವಕ್ಕೆ ನೂತನ ಪಲ್ಲಕ್ಕಿಯಲ್ಲಿ ದೈವಗಳ ಭಂಡಾರ ಬರಲಿದೆ.

ಪಲ್ಲಕ್ಕಿಯನ್ನು ಮೆಲ್ಕಾರ್ ಸಮೀಪದ ಬೋಳಿಯಾರ್ ಹರೀಶ್ ಎಂಬವರು ನಿರ್ಮಿಸಿದ್ದು, ನಿನ್ನೆ ಪ್ರೀತಮ್ ಮುಂಡೋಡಿ, ವಿಜಯ್ ತಂಬ್ಲು ಪಜೆ, ಉದಯ ಮುಂಡೋಡಿ, ದೀಕ್ಷಿತ್ ಮುಂಡೋಡಿ, ಲಿಖಿತ್ ಬಾಳೆಕಜೆ ಯವರು ಮಾಳಿಗೆಗೆ ತಂದರು. ಇಲ್ಲಿ ಪಲ್ಲಕ್ಕಿಗೆ ಕುಂಟಾರು ತಂತ್ರಿಗಳ ಮೂಲಕ ಪೂಜೆ ಸಲ್ಲಿಸಿ ಸಮರ್ಪಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕ ಪ್ರಸಾದ್ ಮುಂಡೋಡಿ ಹಾಗೂ ಸದಸ್ಯರು, ಮಾಜಿ ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.