
ಜಾಲ್ಸೂರು ಗ್ರಾಮದ ಅಡ್ಕಾರು ಕರಾವಳಿ ಹೊಟೇಲ್ ಮುಂಭಾಗ ಕಾರ್ತಿಕೇಯ ಸಿಮೆಂಟ್ ಮತ್ತು ಹಾರ್ಡ್ವೇರ್ ಮಾ.೯ರಂದು ಶುಭಾರಂಭಗೊ0ಡಿತು.
ಸುಳ್ಯ ಭಾರತ್ ಶಾಮಿಯಾನ ಸುಳ್ಯ ಇದರ ಮಾಲಕ ಜಿ.ಪಿ. ಸಂಶುದ್ಧೀನ್ ಅಡ್ಕಾರು, ಜಾಲ್ಸೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ ರಿಬ್ಬನ್ ಕತ್ತರಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.









ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಡ್ಕಾರು ಇದರ ಆಡಳಿತ ಮೊಕ್ತೇಸ ಗುರುರಾಜ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿ ಅಡ್ಕಾರು, ಆಡಳಿತ ಸಮಿತಿಯ ಅಧ್ಯಕ್ಷ ಶಿವರಾಮ ರೈ, ಆಡಳಿತ ಸಮಿತಿಯ ಖಜಾಂಜಿ ಜಯಂತ ಗೌಡ ಸೇರಿ ದೀಪ ಪ್ರಜ್ವಲಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಉದ್ಯಮಿಗಳು ಮತ್ತು ಕನಕಮಜಲು ಪ್ರಾ.ಕೃ.ಪ.ಸಹಕಾರಿ ಸಂಘ (ರಿ) ಇದರ ಅಧ್ಯಕ್ಷ ಸುಧಾಕರ ಕಾಮತ್ ಈ ಸಂದರ್ಭ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಇಲ್ಲಿ ಸಿಮೆಂಟ್, ಹಾರ್ಡ್ವೇರ್ ಉಪಕರಣಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಜನರು ಇದರ ಉಪಯೋಗ ಪಡೆಯುವಂತೆ ಮಾಲಕರಾದ ರವೀಂದ್ರ ನಾಯಕ್ ಅಡ್ಕಾರು ತಿಳಿಸಿದ್ದಾರೆ.










