ಮಯೂರಿ ಯುವತಿ ಮಂಡಲದ ವಾರ್ಷಿಕ ಮಹಾಸಭೆ
ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ಆಶ್ರಯದಲ್ಲಿ ಜೈ ತುಳುನಾಡು ಇದರ ಸಹಯೋಗದೊಂದಿಗೆ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಚೊಕ್ಕಾಡಿ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ತುಳು ಲಿಪಿ ಶಿಕ್ಷಕರಾದ ಜಗದೀಶ್ ಕಲ್ಕಳ ಹಾಗೂ ಚಿತ್ರಾಕ್ಷಿ ತೆಗ್ಗು ಇವರು ತುಳು ಲಿಪಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದವರಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತರ್ಣಗೊಂಡವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿದರು.















ಯುವತಿ ಮಂಡಲ ಮಹಾಸಭೆಯನ್ನು ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ಅನಿಲ್ ಪೂಜಾರಿಮನೆಯವರು ನಡೆಸಿಕೊಟ್ಟರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಕು. ಸ್ವಾತಿಪದವು, ಅಧ್ಯಕ್ಷರಾಗಿ ಶ್ರೀಮತಿ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಕೊರತ್ಯಡ್ಕ ,ಖಜಾಂಜಿಯಾಗಿ ಶ್ರೀಮತಿ ದಿವ್ಯ ನಡುಗಲ್ಲು ,ಉಪಾಧ್ಯಕ್ಷರಾಗಿ ಸನ್ನಿಧಿ ಪೂಜಾರಿ ಮನೆ, ಜತೆ ಕಾರ್ಯದರ್ಶಿಯಾಗಿ ಹೇಮಲತಾ ಪಡ್ಪು ,ಕ್ರೀಡಾ ಕಾರ್ಯದರ್ಶಿಯಾಗಿ ಕುಸುಮ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಅಂಕಿತ ಕೊಪ್ಪತಡ್ಕ ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂರ್ಣಿಮಾ ಪಿಲಿಕಜೆ , ಸಾಂಸ್ಕೃತಿಕ ಜತೆ ಕಾರ್ಯದರ್ಶಿಯಾಗಿ ಮಮತಾ ಪಡ್ಪು, ಸಾಮಾಜಿಕ ಕಾರ್ಯದರ್ಶಿಯಾಗಿ ವೀಣಾ ಪಡ್ಪು, ಸಾಮಾಜಿಕ ಜತೆ ಕಾರ್ಯದರ್ಶಿಯಾಗಿ ಶಶಿಕಲಾ ಕಾಯರ, ಪತ್ರಿಕಾ ಮಾಧ್ಯಮ ಕಾರ್ಯದರ್ಶಿಯಾಗಿ ಯೋಗಿನಿ ಕೊರತ್ಯಡ್ಕ, ಹಾಗೂ ಗೌರವ ಸಲಹೆಗಾರರಾಗಿ ಉಷಾಲತಾ ಪಡ್ಪು, ಪಾರ್ವತಿ ನೇಣಾರು, ಪೂರ್ಣಿಮಾ ಚಿಕ್ಕಿನಡ್ಕ ಮತ್ತು ನಿರ್ದೇಶಕರುಗಳಾಗಿ ದೀಪಿಕಾ, ಶ್ಯಾಮಲ, ಮಾಧವಿ, ವಿದ್ಯಾ ,ನಂದಿನಿ, ತುಳಸಿ , ಸಂಧ್ಯಾ, ಸೀತಾಲಕ್ಷ್ಮಿ
ಆಯ್ಕೆಗೊಂಡರು,
ಯುವತಿ ಮಂಡಲದ ಪೂರ್ವಾಧ್ಯಕ್ಷೆಯಾದ ಕು. ಸ್ವಾತಿ ಯವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸನ್ನಿಧಿ ಪ್ರಾರ್ಥಿಸಿ, ಶ್ರೀಮತಿ ದಿವ್ಯ ಸ್ವಾಗತಿಸಿದರು. ಶ್ರೀಮತಿ ನಂದಿನಿ ಧನ್ಯವಾದಗೈದರು. ಶ್ರೀಮತಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.










