ಬಾಳಿಲ ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿಯ ಮಾಜಿ ಅಧ್ಯಕ್ಷ, ಸಂಚಾಲಕ ಗೋವಿಂದ ಭಟ್ಟರಿಗೆ ನುಡಿನಮನ

0

2003ರಿಂದ 2014ರ ತನಕ ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾಗಿ, ಬಳಿಕ 2020ರ ತನಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಭಟ್ ನೆಟ್ಟಾರು ಇವರಿಗೆ ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿಯ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಮಾ. 10ರಂದು ನಡೆಯಿತು.


ಸೊಸೈಟಿಯ ಅಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರೆ, ಸಂಚಾಲಕರಾದ ಪಿ.ಜಿ.ಎಸ್.ಎನ್. ಪ್ರಸಾದ್, ಮಾಜಿ ಅಧ್ಯಕ್ಷ ಹಾಗೂ ಸಂಚಾಲಕ ನೆಟ್ಟಾರು ವೆಂಕಟ್ರಮಣ ಭಟ್, ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಪ್ರಭಾರ ಶಿಕ್ಷಕ ಉದಯಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಗುರುಗಳಾದ ಯಶೋಧರ ನಾರಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಉದಯಕುಮಾರ್ ರೈ ವಂದಿಸಿದರು.


ಪ್ರೌಢಶಾಲಾ ಸಂಸ್ಕ್ರತ ಶಿಕ್ಷಕ ವೆಂಕಟೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಬೋಧಿನೀ ಎಜ್ಯುಕೇಶನ್ ಸೊಸೈಟಿಯ ಪದಾಧಿಕಾರಿಗಳು, ಸದಸ್ಯರು, ಉಭಯ ವಿದ್ಯಾಸಂಸ್ಥೆಗಳ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ, ಶಾಲಾ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿ ಕು. ನಿತ್ಯಶ್ರೀ, ಪ್ರೌಢಶಾಲಾ ಹಿಂದಿ ಶಿಕ್ಷಕ ಲೋಕೇಶ್ ಬೆಳ್ಳಿಗೆ, ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಭಾಸ್ಕರ ರಾವ್ ಮೃತರಿಗೆ ನುಡಿನಮನ ಸಲ್ಲಿಸಿದರು.