ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ‌ ದೇವಸ್ಥಾನ – ಪರಿವಾರ ದೈವಗಳಾದ ಕಳರಿ ಧೂಮಾವತಿ ದೈವಸ್ಥಾನಕ್ಕೆ ಕುಟ್ಟಿ ಮುಹೂರ್ತ

0

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿವಾರ ದೈವಗಳಾದ ಶ್ರೀ ಕಳರಿ ಧೂಮಾವತಿ ದೈವಸ್ಥಾನಕ್ಕೆ ಮುಹೂರ್ತ ಕುಟ್ಟಿ ಹಾಗೂ ಮುಹೂರ್ತ ಕಲ್ಲು ಇಡುವ ಕಾರ್ಯಕ್ರಮ ಮಾ.10ರಂದು ನಡೆಯಿತು.

ದೇವಸ್ಥಾನಕ್ಕೆ ಸಂಬಂಧ ಪಟ್ಟ ಶಿಲ್ಪಿ ರಮೇಶ್ ಕಾರಂತ ಬೆದ್ರಾಡಿ ಕಾಸರಗೋಡು ರವರು , ಶಿಲ್ಪಿ ರಾಧಾಕೃಷ್ಣ ಆಚಾರ್ಯ ವಿನೋಬನಗರ ಮತ್ತು ಮೇಸ್ತ್ರಿ ವಿಜಯ ಗೌಡ ಅಡ್ಕಾರು ರವರ ಸಹಾಯದೊಂದಿಗೆ ಮುಹೂರ್ತ ಕುಟ್ಟಿ ಮತ್ತು ಮುಹೂರ್ತ ಕಲ್ಲು ಇಡುವ ಕಾರ್ಯಕ್ರಮವು
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾದ ಶ್ರೀವರ ಪಾಂಗಣ್ಣಾಯರವರು, ದೈವಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ  ಮೊಕ್ತೇಸರರಾದ  ಗುರುರಾಜ್ ಭಟ್, ಹಾಗೂ

ವ್ಯವಸ್ಥಪನಾ ಸಮಿತಿಯ ಅಧ್ಯಕ್ಷರಾದ ಹರಿಪ್ರಕಾಶ್ ಅಡ್ಕಾರು ಮತ್ತು ಸದಸ್ಯರು, ಉತ್ಸವ ಸಮಿತಿಯ ಅಧ್ಯಕ್ಷರಾದ ಗಣೇಶ್ ರೈ ಕುಕ್ಕಂದೂರು ಹಾಗೂ ಪದಾಧಿಕಾರಿಗಳು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಮೋಹನ ನಂಗಾರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಅಡ್ಕಾರು ಹಾಗು ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಹಲವಾರು ಗಣ್ಯರು ಭಗವದ್ ಭಕ್ತರು ಉಪಸ್ಥಿತರಿದ್ದರು.