
ಮಾ.9ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಂದ್ಯಾಟ ‘ ರೋಟರಿ ಪ್ರೀಮಿಯರ್ ಲೀಗ್. ಸೀಸನ್ -3 ‘ ಆಯೋಜಿಸಲಾಯಿತು. ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಚಾರೀಟೇಬಲ್ ಟ್ರಸ್ಟ್ (ರಿ) ಸುಳ್ಯದ ಟ್ರಸ್ಟಿ ರೊ.ಆನಂದ ಖಂಡಿಗ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.








ರೋಟರಿ ಚಾರೀಟೇಬಲ್ ಟ್ರಸ್ಟ್ (ರಿ) ಸುಳ್ಯದ ಖಜಾಂಚಿ ರೊ. ಮಧುಸೂದನ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ,ಆಟ ಮತ್ತು ಆಟಗಾರರಿಗೆ ಸಿಗುವ ಗೌರವವನ್ನು ತಿಳಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ರೊ.ಪ್ರಭಾಕರನ್ ನಾಯರವರು ವಹಿಸಿ,ವಿಜೇತ ತಂಡ ಹಾಗೂ ವೈಯಕ್ತಿಕ ವಿಭಾಗದ ಬಹುಮಾನಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕು.ಭಾನವಿ ಕೊಯಿಂಗಾಜೆ ಮತ್ತು ಕು. ವೈಷ್ಣವಿ ಪ್ರಾರ್ಥನೆ ಗೀತೆ ಹಾಡಿದರು.
ವಿದ್ಯಾರ್ಥಿನಿ ತಹಾನೀಯ ಉದ್ಘಾಟನಾ ಸಮಾರಂಭದ ನಿರೂಪಣೆ ಮಾಡಿದರು. ಉಪನ್ಯಾಸಕಿ ಶ್ರೀಮತಿ ಸಂಧ್ಯಾ ವಂದನಾರ್ಪಣೆ ಗೈದರು. ರೊ. ಶ್ರೀಮತಿ ಲತಾ ಮಧುಸೂದನ , ಪಿ ಟಿ ಎ ಸದಸ್ಯ ಮಹಮ್ಮದ್ ಹನೀಫ್ ಹಾಗೂ ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ವೀಣಾ ಶೇಡಿಕಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಟದ ವೀಕ್ಷಕ ವಿವರಣೆಗಾರರಾಗಿ ಶಶಿಕಾಂತ ಮಿತ್ತೂರು ಹಾಗೂ ಲಿಖೇಶ್ ಸುಳ್ಯ, ಆಫ್ ಲೈನ್ ಸ್ಕೋರರ್ ರಾಗಿ ಸುದೀರ ದೇವ ಮತ್ತು ಪಂದ್ಯದ ನಿರ್ಣಾಯಕರಾಗಿ ಲವೀನ್ ಐಡಿಯಲ್ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಕ ರಂಗನಾಥ ರವರು ಸಹಕರಿಸಿದರು. ಸಂಸ್ಥೆಯ ಸಮರ್ಪಣ್ ತಂಡವು ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ಸಂಕಲ್ಪ್ ತಂಡ ಪಡೆಯಿತು.ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ವಿದ್ಯಾರ್ಥಿ ಮಿಲನ್ ಪಡೆದರು.










