ಬೆಳ್ಳಾರೆ : ಪೈಪ್ ಲೈನ್ ಕಾಮಗಾರಿ – ಅಪಾಯದಲ್ಲಿರುವ ರಸ್ತೆ ಬದಿ ಹೊಂಡ

0

ಬೆಳ್ಳಾರೆ ಮಾಸ್ತಿಕಟ್ಟೆ ಬಳಿ ರಸ್ತೆ ಬದಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಹೊಂಡಗಳನ್ನು ಮುಚ್ಚದೆ ಅಪಾಯದ ಸ್ಥಿತಿಯಲ್ಲಿದೆ.
ರಸ್ತೆ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿಗೆ ಅಗೆದಿದ್ದು ಅದನ್ನು ಮುಚ್ಚದೆ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.


ವಾಹನಗಳು ಸೈಡ್ ಕೊಡುವಾಗ ಹೊಂಡಕ್ಕೆ ಬೀಳುವ ಸಂಭವವಿರುವುದರಿಂದ ಕೂಡಲೇ ಹೊಂಡಗಳನ್ನು ಮುಚ್ಚಿ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.