ಏನೆಕಲ್ಲು : ಅಜಿರ್ಪೊಳಿ ಗುಡ್ಡಕ್ಕೆ ಬೆಂಕಿ

0

ಏನೆಕಲ್ಲು ಗ್ರಾಮದ ಅಜಿರ್ಪೊಳಿ ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಸುಮಾರು 10 ಎಕ್ರೆಯಷ್ಟು ಅಗಲಕ್ಕೆ ಬೆಂಕಿ ವ್ಯಾಪಿಸಿದೆ.

ಇಂದು ಸಂಜೆ ಸುಮಾರು 3 ಗಂಟೆಯ ವೇಳೆಗೆ ಬೆಂಕಿ ಬಿದ್ದಿದ್ದು, ಇಡೀ ಗುಡ್ಡ ಹೊತ್ತಿ ಉರಿಯುವಷ್ಟು ಬೆಂಕಿ ವ್ಯಾಪಿಸಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗ ಇದಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಊರವರ ಸಹಾಯದಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.