ಬಾಳುಗೋಡು : ತೋಟಕ್ಕೆ ಆನೆ ದಾಳಿ ಕೃಷಿ ನಾಶ

0

ಬಾಳುಗೋಡು ಗ್ರಾಮ ಕಟ್ಟೆಮನೆ ಶೈಲೇಶ್ ಎಂಬವರ ತೋಟಕ್ಕೆ ನಿನ್ನೆರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ತೆಂಗು,ಅಡಿಕೆ,ಬಾಳೆಗಿಡಗಳನ್ನು ಹಾನಿ ಮಾಡಿದ ಘಟನೆ ನಡೆದಿದೆ.


ಆನೆ ಬೆಂಡೋಡಿ, ಕಾಂತುಕುಮೇರಿ,ದೇವರುಳಿಯ,ಕಟ್ಟೆಮನೆ ಬಸವನಗುಡಿ ಈ ಬಾಗಗಳ ಹಲವು ಕೃಷಿ ತೋಟಗಳಲ್ಲಿ ಹಾನಿ ಮಾಡಿದ್ದು,ಹಲವು ದಿನಗಳಿಂದ ಇಲ್ಲೆ ಬೀಡುಬಿಟ್ಟಿದ್ದ ರೈತರು ಹಾಗು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.


ಅರಣ್ಯ ಇಲಾಖೆ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.