
ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ಒತ್ತೆಕೋಲ ಉತ್ಸವವು ಮಾ. 28 ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ,ಮಾರ್ಚ್ 14 ರಂದು ಒತ್ತೆಕೋಲಕ್ಕೆ ಕೊಳ್ಳಿ ಕಡಿಯುವ ಮೂಹೂರ್ತವು ನಡೆಯಿತು.


ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಕ್ಕೆ ವಿಶೇಷ ಪೂಜೆಯನ್ನು ಮಾಡಿ ಬಳಿಕ ಕೆ. ಬಿ ಕೇಶವ ಆಚಾರ್ಯ ಕೀಲಾರು ಬೈಲು ಮುಹೂರ್ತದ ಕೊಳ್ಳಿಯನ್ನು ಕಡಿದು , ವಾದ್ಯ ಘೋಷದೊಂದಿಗೆ ಒತ್ತೆಕೋಲ ಗದ್ದೆಗೆ ಸಾಗಿ ಬಂದು ವಿಷ್ಣುವಿನ ಕಟ್ಟೆಗೆ ವಿಶೇಷ ಪೂಜೆ ಪ್ರಾರ್ಥನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಒತ್ತೆಕೋಲ ಉತ್ಸವ ಸಮಿತಿಯ ಗೌರವಾಧ್ಯಕ್ಷ. ರಾಜಾರಾಮ ಕೀಲಾರು, ಅಧ್ಯಕ್ಷ ಕೆ. ಆರ್ ಜಗದೀಶ್ ರೈ , ಮೊಕ್ತೇಸರರು ಕೆ. ಕರುಣಾಕರ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಖಜಾಂಜಿ/ ಕೋಶಾಧಿಕಾರಿ ಬಿ .ಆರ್. ಪದ್ಮಯ್ಯ, ಗೌರವ ಸಲಹೆಗಾರರು ಶ್ರೀಧರ ಮಾದೇಪಾಲು -ಅರ್ಚಕ ನರಸಿಂಹ ಭಟ್, ದೈವದ ಪೂಜಾಕರ್ಮಿ ನಾರಾಯಣ ಮಣಿಯಾಣಿ, ಶಿವರಾಮ ಮಣಿಯಾಣಿ , ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕೆ.ಕೆ, ತೀಯ ಸಮಾಜ ಗೌರವಾಧ್ಯಕ್ಷ ಉದಯ ಕುಮಾರ್ ಕೈಪಡ್ಕ , ತೀಯ ಸಮಾಜದ ಮಾಜಿ ಗೌರವಾಧ್ಯಕ್ಷ ಜನಾರ್ದನ ಕಡೆಪಾಲ, ಜಯಾನಂದ ಸಂಪಾಜೆ, ಕೆ.ವಿ ಉದಯ ಶಂಕರ್ ಕುಕ್ಕೇಟಿ, ಸುರೇಶ್ ಕದಿಕಡ್ಕ, , ಶ್ರೀ ರಾಮಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಜಗೋಪಾಲ್ ಉಳುವಾರು, ರಾಘವೇಂದ್ರ ಬೇಕರಿ ಮಾಲಕ ಸುನಿಲ್ ಕುಮಾರ್, ಶ್ರೀಧರ ದುಗ್ಗಳ , ಬಿ ಕೆ ಚಂದ್ರ ಶೇಖರ್ ಬಾಚಿ ಗದ್ದೆ ವಿ .ವಿ ಬಾಲನ್ ಮೇಸ್ತ್ರಿ , ದಿವಾಕರ ರೈ, ನಾಗೇಶ್ ಪೇರಾಲು , ಕಿರಣ್ ಕುಮಾರ್ ಮಾದೇಪಾಲ, ಪಿ. ಬಿ ಕಿಶೋರ್ ಕುಮಾರ್, ಕಿಶೋರ್ ಕುಮಾರ್ ಕೆ. ಅಡ್ಕಾರು ವಾಸುದೇವ ಕಟ್ಟೆಮನೆ , ಕುಶಾಲಪ್ಪ ಬೊಳುಗಲ್ಲು , ಕೂಸಪ್ಪ ಬೊ ಳುಗಲ್ಲು, ಹಾಗೂ ದೈವಸ್ಥಾನದ ಪದಾಧಿಕಾರಿಗಳು, ಸದಸ್ಯರು, ಹಾಗೂ ತೀಯ ಸಮಾಜದ ಆಡಳಿತ ಮಂಡಳಿ – ಸರ್ವಸದಸ್ಯರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಹಾವಿಷ್ಣು ಮೂರ್ತಿ ದೈವದ ಅರಶಿನ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.