ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರುನಾಯರ್ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಮಾ.14 ರಂದು ಉಬರಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ದೀಪಬೆಳಗಿಸಿ ಉದ್ಘಾಟಿಸಿದರು. ಮಿತ್ತೂರು ನಾಯರ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಾರದಾ ಡಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಬರಡ್ಕ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ಪಾಲಡ್ಕ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ತಾಲೂಕು ಪಂಚಾಯತ್ ಕೃಷಿ ಜೀವನೋಪಾಯ ವ್ಯವಸ್ಥಾಪಕ ಜೀವನ್ ಪ್ರಕಾಶ್, ಎಸ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತ, ಗ್ರಾ.ಪಂ ಸದಸ್ಯೆ ಮಮತಾ ಕುದ್ಪಾಜೆ, ತಾಲೂಕು ವಲಯ ಮೇಲ್ವಿಚಾರಕ ಮಹೇಶ್, ಆಪ್ತ ಸಮಲೋಚಕಿ ಸುಜಾತಾ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ನಳಿನಾಕ್ಷ್ಷಿ ಕೈಪೆ, ಕಾರ್ಯದರ್ಶಿ ಶೈಲಜಾ ಹುಳಿಯಡ್ಕ, ಜತೆಕಾರ್ಯದರ್ಶಿ ಶ್ರೀಮತಿ ವಾರಿಜಾ ಮಂಜಿಕಾನ, ಖಜಾಂಜಿ ಸುಶೀಲ ಮೂರ್ಜೆ ಹಾಜರಿದ್ದರು.

ಈ ಸಂದರ್ಭದಲ್ಲಿ ಹೈನುಗಾರಿಕೆ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ಪ್ರಗತಿ ಸಾಧಿಸಿದ ಒಕ್ಕೂಟದ ಸದಸ್ಯರಾದ ಶ್ರೀಮತಿ ಸುಜಾತ ಭಾಸ್ಕರ ರಾವ್ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಒಕ್ಕೂಟದ ಸದಸ್ಯೆ ಶ್ರೀಮತಿ ರೇಖಾ ಇವರನ್ನು ಸನ್ಮಾನಿಸಲಾಯಿತು.
ಸುಶೀಲಾ ಮೂರ್ಜೆ ಪ್ರಾರ್ಥಿಸಿ, ವಾರಿಜಾ ಮಂಜಿಕಾನ ಸ್ವಾಗತಿಸಿದರು. ತಾರಾ ಭರ್ಜರಿಗುಂಡಿ ವರದಿ ವಾಚಿಸಿದರು. ಅಶ್ವಿತಾ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು. ಶುಭಲತಾ ಶೆಟ್ಟಿಮಜಲು ಲೆಕ್ಕಪರಿಶೋಧನಾ ವರದಿ ವಾಚಿಸಿ ವಂದಿಸಿದರು.