ನಾರ್ಣಕಜೆಯ ಅತುಲಾರಿಗೆ ಒಂದನೇ ರ್ಯಾಂಕ್, ವಿತುಲಾರಿಗೆ 9 ನೇ ರ್ಯಾಂಕ್
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಅವಳಿ ಸಹೋದರಿಯರು ಸಾಧನೆ ಮಾಡಿದ್ದಾರೆ.
ನಾರ್ಣಕಜೆಯ ಶ್ರೀಮತಿ ಶಶಿಕಲಾ ಮತ್ತು ನಾರಾಯಣ ಪ್ರಭು ಅವರ ಅವಳಿ ಪುತ್ರಿಯರಾದ ಅತುಲ ಮತ್ತು ವಿತುಲ ಈ ಸಾಧನೆ ಮಾಡಿದ್ದಾರೆ.
ಅತುಲ ಇವರು ಹಿಂದಿ ವಿಷಯದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ರಾಷ್ಟ್ರ ಭಾಷಾ ಪ್ರವೀಣ್ ಪದವಿಯನ್ನೂ ಪಡೆದಿರುವ ಅತುಲ ಅವರು ಪ್ರಸ್ತುತ ಸುಳ್ಯದ ಜ್ಯೋತಿ ವೃತ್ತದ ಬಳಿಯ ಶ್ರೀ ಶಾರದ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿತುಲ ಇವರು ಎಂ.ಕಾಂ. ನಲ್ಲಿ 9 ನೇ ರ್ಯಾಂಕ್ ಪಡೆದಿದ್ದು ಇವರು ಪ್ರಸ್ತುತ ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ