
ಇತಿಹಾಸ ಪ್ರಸಿದ್ಧ ಶ್ರೀ ನಾಗ ಬ್ರಹ್ಮ ಕೋಟಿ ಚೆನ್ನಯ್ಯ ಆದೀ ಗರಡಿಯಲ್ಲಿ ಮಾ 14 ರಂದು ಅನುವಂಶಿಕ ಆಡಳಿತ ದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಮಾಸಿಕ ಸಂಕ್ರಮಣ ತಂಬಿಲ ಸೇವೆ ಹರಿಕೆ ತಂಬಿಲ, ಪ್ರಸಾದ ವಿತರಣೆ ನಡೆಯಿತು.
ಎ.11 ರಂದು ವಾರ್ಷಿಕ ಜಾತ್ರೆಯ ಯಶಸ್ವಿ ಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಹರಿಕೆ ತಂಬಿಲ, ಮಹಾ ಪೂಜೆ, ಪ್ರಸಾದ ವಿತರಣೆ, ನಡೆಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ಆರ್ ಶೆಟ್ಟಿ ಕಟ್ಟಬೀಡು, ಗರಡಿ ಮಾಹಿತಿ ದಾರ ಎನ್ ಜಿ ಲೋಕನಾಥ ರೈ, ಜಗನ್ನಾಥ ರೈ, ಕುಳಾಯಿತೋಡಿ,ಅನುಪು ಕುಮಾರ್ ಆಳ್ವ, ಸುಧೀರ್ ಕುಮಾರ್ ಶೆಟ್ಟಿ ಕೆ, ನಾಗೇಶ್ ಆಳ್ವ ಕೆ, ಸುಜಿತ್ ರೈ ಪಟ್ಟೆ, ಇನ್ನಿತರ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಸಂಕಪ್ಪ ಸಾಲಿಯನ್