ಐವತ್ತೊಕ್ಲು ಗ್ರಾಮದ ಮುಚ್ಚಿಲ ಮರಕ್ಕಡ ಸಮೀಪದ ನಿವಾಸಿ, ನಿವೃತ್ತ ವಲಯಾರಣ್ಯಾಧಿಕಾರಿ ಕೆ.ವಿ.ಜೋಸೆಫ್ ರವರು ಕಾರು ಅಪಘಾತದಲ್ಲಿ ನಿಧನರಾದ ಘಟನೆ ಮಾ. 15ರಂದು ನಡೆದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ತಮ್ಮ ಕಾರನ್ನು ಮನೆಯ ಕಾರ್ ಶೆಡ್ ನಲ್ಲಿ ನಿಲ್ಲಿಸುತ್ತಿರುವ ಸಂದರ್ಭ ಕಾರು ಅಚಾನಕ್ಕಾಗಿ ಮುಂದಕ್ಕೆ ಚಲಿಸಿ ಮುಂಭಾಗದಲ್ಲಿದ್ದ ಜೋಸೆಫ್ ರಿಗೆ ಗುದ್ದಿದ ಪರಿಣಾಮವಾಗಿ ತೀವ್ರ ಗಾಯಗೊಂಡ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಕಾರು ಗುದ್ದಿ ತೀವ್ರ ಪರಿಣಾಮವಾದಾಗ ಅವರ ಪತ್ನಿ ಬೊಬ್ಬೆ ಹೊಡೆಯತೊಡಗಿದರೆಂದೂ ಇದನ್ನು ಕೇಳಿ ಸಮೀಪದ ಮನೆಯವರುಗಳಾದ ಅಜೀಜ್ ಮರಕ್ಕಡ, ರಹೀಂ ಮರಕ್ಕಡ, ಹಮೀದ್ ಮರಕ್ಕಡ, ಆಸಿಫ್ ಮರಕ್ಕಡ ಮೊದಲಾದವರು ಓಡಿ ಬಂದು ಜೋಸೆಫ್ ರನ್ನು ಮೇಲಕ್ಕೆತ್ತಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೆಂದೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆಂದೂ ತಿಳಿದುಬಂದಿದೆ.
ಜೋಸೆಫ್ ರವರು ಸಂಪಾಜೆ, ಪಂಜ, ಪುತ್ತೂರು, ಮಂಗಳೂರಿನಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿರುವ ಜೋಸೆಫ್ ರವರು ಪತ್ನಿ ಶ್ರೀಮತಿ ಮೇರಿ ಜೋಸೆಫ್, ಪುತ್ರ ಆಸ್ಟ್ರೇಲಿಯಾದಲ್ಲಿ ಉದ್ಯೋಗಿಯಾಗಿರುವ ಅಜಯ್ ಬೋಸ್, ಪುತ್ರಿ ಶ್ರೀಮತಿ ಹರ್ಷ ಬೋಸ್ ಸೇರಿದಂತೆ ಇಬ್ಬರು ಸಹೋದರರು, ಓರ್ವ ಸಹೋದರಿ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಪುತ್ರ ಆಸ್ಟ್ರೇಲಿಯಾದಿಂದ ಬಂದ ಬಳಿಕವಷ್ಟೇ ಅಂತಿಮ ಕಾರ್ಯ ನಡೆಸುವುದರಿಂದ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಶೈತ್ಯಾಗಾರದಲ್ಲಿ ಇರಿಸಲಾಗಿರುವುದಾಗಿ ತಿಳಿದುಬಂದಿದೆ.