Home ಚಿತ್ರವರದಿ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಕೆವಿ ಜಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆಯ ಅಂಗವಾಗಿ, “ಪರಿಣಾಮಕಾರಿ ಸಂವಹನ ಕೌಶ ಲ್ಯಗಳು ಮತ್ತು ನಾಯಕತ್ವ” ಎಂಬ ವಿಷಯವಾಗಿ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮ ವನ್ನು ಮಾರ್ಚ್ 25 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾ oಶುಪಾಲರಾದ ಡಾ. ಉದಯಕೃಷ್ಣ ಬಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿದ ಸುಳ್ಯ ದ ಅಂಜಲಿ ಮೊಂಟೆಸ್ಸರಿ ಯ ಸಂಚಾಲಕಿ, ಸಂವಹನ ಕೌಶಲ್ಯ ತರಬೇತುದಾರೆ ಶ್ರೀಮತಿ. ಗೀತಾoಜಲಿ ಟಿ ಜಿ, ಪರಿಣಾಮಕಾರಿ ಸಂವಹನ ಕೌಶಲ್ಯ ಗಳು ಮತ್ತು ನಾಯಕತ್ವದ ವಿಷಯವಾಗಿ ಉಪನ್ಯಾಸ ಮತ್ತು ತರಬೇತಿ ನೀಡಿದರು.

ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾoಶುಪಾಲ, ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ ಕೆ ವಿ ದಾಮೋದರ ಗೌಡರು, ” ವೃತ್ತಿಪರ ಕ್ಷೇತ್ರದಲ್ಲಿ ಸಂವಹನ ಕೌಶಲ್ಯಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಯಾವುದೇ ವೃತ್ತಿ ಯಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹೊಂದಿದ್ದಲ್ಲಿ ವೃತ್ತಿಪರ ಯಶಸ್ಸನ್ನು ಹೊಂದಲು ಸಾಧ್ಯ”. ಎಂದು ತಿಳಿಸಿದರು.ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಂಯೋಜಕಿ ಶ್ರೀಮತಿ. ರಚನಾ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ವಿದ್ಯಾರ್ಥಿನಿ ಜಯಂತಿ ಡಯಾಸ್ ಸ್ವಾಗತಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

NO COMMENTS

error: Content is protected !!
Breaking