ಉಬರಡ್ಕ ಮಿತ್ತೂರು ಗ್ರಾಮದ ಕೃಷಿಕ ಕೃಷ್ಣನ್ ನಾಯರ್ ಕುತ್ತಮೊಟ್ಟೆಯವರು ವಿಜಯ ಕರ್ನಾಟಕ ಪತ್ರಿಕೆಯ ವಿಕ ಸೂಪರ್ ಸ್ಟಾರ್ ರೈತ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣನ್ ನಾಯರ್ ಸಹಿತ ಹಲವು ಕೃಷಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಯೋಗ ಶೀಲ ಕೃಷಿಕರಾಗಿರುವ ಕೃಷ್ಣನ್ ನಾಯರ್ ಅವರು ಅಡಿಕೆ, ತೆಂಗು , ಕಾಳು ಮೆಣಸು, ಹಣ್ಣು ಹಂಪಲು, ತರಕಾರಿ ಬೆಳೆಯುತ್ತತಾರಲ್ಲದೆ ಮೀನುಗಾರಿಕೆಯನೂ ನಡೆಸುತ್ತಿದ್ದಾರೆ. ಕೃಷ್ಣನ್ ನಾಯರ್ ಅವರು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಅಧ್ಯಕ್ಷ ರಾಗಿದ್ದಾರೆ.