ಸುಳ್ಯ ತಾಲೂಕಿನಲ್ಲಿ 9/11ಗೆ ಸಂಬಂಧಪಟ್ಟ ಸುಮಾರು 160ಕ್ಕಿಂತಲೂ ಹೆಚ್ಚಿನ ಅರ್ಜಿಗಳು ತಾಲೂಕು ಪಂಚಾಯತ್‌ನಲ್ಲಿ ವಿಲೇವಾರಿಯಾಗದೇ ಬಾಕಿ ಉಳಿದಿದೆ. ಮೂಡಾ ಅನುಮತಿಗಾಗಿ ಪುತ್ತೂರು, ಮಂಗಳೂರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ನೂರಾರು ಜನರ ನಿರೀಕ್ಷೆಗಳು ಕಮರಿಹೋಗಿವೆ. ಮತ್ತು ಗ್ರಾಮೀಣ ಜನರ ಜೀವನ ದುಸ್ತರವಾಗಿದೆ.



ಆದುದರಿಂದ ಈಗ ಸುಳ್ಯದಲ್ಲಿ ಸುಳ್ಯ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ರಚನೆಯಾಗಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳ ಕಡತಗಳನ್ನು ಸುಳ್ಯದಲ್ಲಿಯೇ ಪರಿಹರಿಸುವ ಕೆಲಸವಾಗಬೇಕು. ಸುಳ್ಯ ವಿಧಾನಸಭಾ ಶಾಸಕರು ಮತ್ತು ಸೂಡಾ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತವಾಗಿ ಈ ಎಲ್ಲಾ 9/11ಕಡತಗಳ ವಿಲೇವಾರಿಮಾಡಿ ತಾರ್ಕಿಕ ಅಂತ್ಯ ತರಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.