ಪೈಚಾರ್ :ಅಲ್ ಅಮೀನ್ ಯೂತ್ ಸೆಂಟರ್ ಇದರ ವತಿಯಿಂದ ಬೃಹತ್ ಇಫ್ತಾರ್ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ

0

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಬೃಹತ್ ಇಫ್ತಾರ್ ಕೂಟ ಹಾಗೂ ಸಾಧಕಿ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ಅಸ್ಸಯ್ಯದ್ ಕುಂಞಿ ಕೋಯಾ ಸಅದಿ ತಂಙಳ್ ರವರು ದುವಾ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷ ಸತ್ತಾರ್ ಪೈಚಾರ್ ರವರು ವಹಿಸಿದ್ದರು.

ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಖಥಿಬರಾದ ಸಮೀರ್ ನಹೀಮಿ, ಜಮಾಅತ್ ಕಮಿಟಿಯ ಅಧ್ಯಕ್ಷರಾದ ಪಿ ಇಬ್ರಾಹಿಂ ಹಾಜಿ, ಸ್ಥಳೀಯ ಸಂಘಟನೆಯ ಮುಖಂಡರುಗಳಾದ ಡಾlಆರ್ ಬಿ ಬಶೀರ್,ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮಟ್ಟೆ,ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್, ಜಮಾಅತ್ ಕಮಿಟಿ ಕಾರ್ಯದರ್ಶಿ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ 2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಇದರ ಅದೀನದಲ್ಲಿ ನಡೆದ 7ನೇ ತರಗತಿ ಪರೀಕ್ಷೆಯಲ್ಲಿ ಸುಳ್ಯ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಪೈಚಾರ್ ಮದರಸದ ವಿದ್ಯಾರ್ಥಿನಿ ಖದೀಜತ್ ಸಲ್ವಾ ಹನೂನ್ ಅವರಿಗೆ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.

ಬಳಿಕ ನಡೆದ ಇಫ್ತಾರ್ ಸಂಗಮದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಮುಸಲ್ಮಾನ ಭಾಂದವರು ಭಾಗವಹಿಸಿದ್ದರು.ಕಾರ್ಯದರ್ಶಿ ಸಾಲಿ ಪೈಚಾರ್ ಹಾಗೂ ಸಮಿತಿಯ ಸದಸ್ಯರುಗಳು ಸಹಕರಿಸಿದರು.