Home Uncategorized ಬೆಳ್ಳಾರೆಯಲ್ಲಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮ

ಬೆಳ್ಳಾರೆಯಲ್ಲಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮ

0

ಬಂಗ್ಲೆಗುಡ್ಡೆ ಪ್ರವಾಸಿ ಕೇಂದ್ರವಾಗಿ ಮೂಡಿ ಬರಲಿ : ಭಾಗೀರಥಿ ಮುರುಳ್ಯ

ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ ,ಗ್ರಾಮ ಪಂಚಾಯತ್ ಬೆಳ್ಳಾರೆ,ಸ್ನೇಹಿತರ ಕಲಾ ಸಂಘ ಬೆಳ್ಳಾರೆ,ಅಕ್ಷಯ ಯುವಕ ಮಂಡಲ ನೆಟ್ಟಾರು ಸಂಯುಕ್ತ ಆಶ್ರಯದಲ್ಲಿ 1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188 ನೇ ವರ್ಷದ ನೆನಪಿಗಾಗಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮವು ಮಾ.30 ರಂದು ಬೆಳ್ಳಾರೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು.


ಶಾಸಕಿ ಭಾಗೀರಥಿ ಮುರುಳ್ಯರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿ ಬೆಳ್ಳಾರೆಯ ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು.


ಅಂದಿನ ಹೋರಾಟದ ಬಗ್ಗೆ ಜನರಿಗೆ ತಿಳಿಸುವಂತೆ ಆಗಬೇಕು.ಹೋರಾಟದಲ್ಲಿ ಮಡಿದವರನ್ನು ನೆನಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಅಭಿವೃದ್ಧಿಗೆ ಸರಕಾರದ ಅನುದಾನಕ್ಕೆ ಶ್ರಮ ವಹಿಸುವುದಾಗಿ ಅವರು ಹೇಳಿದರು.
ಬಂಗ್ಲೆಗುಡ್ಡೆಗೆ ಹೋಗುವ ರಸ್ತೆಯನ್ನು ಕೂಡಲೇ ಅಭಿವೃದ್ಧಿ ಪಡಿಸುವುದಾಗಿ ಅವರು ಭರವಸೆ ನೀಡಿದರು.


ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ ನ ಅಧ್ಯಕ್ಷ ಅನಿಂದಿತ್ ಕೊಚ್ಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳರವರು ಮಾತನಾಡಿ ಅಂದು ಭೌಗೋಳಿಕವಾದಂತಹ ಹೋರಾಟ ಆಗಿದೆ.ಯಾವುದೇ ಜಾತಿ,ಮತ,ಭೇದವಿಲ್ಲದೆ ಸಮಗ್ರ ಹೋರಾಟವಾಗಿತ್ತು ಎಂದು ಹೇಳಿದರು.


ಬೆಳ್ಳಾರೆ ಐತಿಹಾಸಿಕ ಸ್ಥಳದ ಮಹತ್ವದ ಬಗ್ಗೆ ಮತ್ತು ಅಂದು ಬ್ರಿಟೀಷರ ವಿರುದ್ಧ ಹೋರಾಟದ ಬಗ್ಗೆ ಅವರು ಮಾಹಿತಿ ನೀಡಿದರು.
ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊಣ್ಣಣ್ಣರವರು ಮಾತನಾಡಿ ಬೆಳ್ಳಾರೆಗೆ ವಿಶೇಷವಾದ ಮಹತ್ವ ಇದೆ.ಇಲ್ಲಿಸ್ವಾತಂತ್ರ್ಯ ಸಂಗ್ರಾಮದ ಮ್ಯೂಸಿಯಂ ಸ್ಥಾಪನೆಯಾಗಬೇಕು ಎಂದು ಹೇಳಿದರು.ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಹೇಳಿದರು.
ಸಭಾ ಕಾರ್ಯಕ್ರಮದ ಮೊದಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತ ಎಲ್.ರೈಯವರು ಬಂಗ್ಲೆಗುಡ್ಡೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ನೆಟ್ಟಾರು,ಬೆಳ್ಳಾರೆ ಕೆಪಿಎಸ್ ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ,ಸ್ನೇಹಿತರ ಕಲಾ ಸಂಘದ ಪೂರ್ವಾಧ್ಯಕ್ಷ ವಸಂತ ಉಲ್ಲಾಸ್ ಉಪಸ್ಥಿತರಿದ್ದರು.
ಇಂಚನ ಪಿ.ಡಿ.ಪ್ರಾರ್ಥಿಸಿ,ಗ್ರಾ.ಪಂ.ಸದಸ್ಯ.ಚಂದ್ರಶೇಖರ ಪನ್ನೆ ಸ್ವಾಗತಿಸಿದರು.ದಿಲೀಪ್ ಗಟ್ಟಿಗಾರು ಕಾರ್ಯಕ್ರಮ‌ ನಿರೂಪಿಸಿ,ಶೈಲೇಶ್ ನೆಟ್ಟಾರು ವಂದಿಸಿದರು.

NO COMMENTS

error: Content is protected !!
Breaking