ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಕಥೋಲಿಕ್ ಸಭಾ ಸುಳ್ಯ ಘಟಕದ ಚುನಾವಣೆಯು ಇತ್ತೀಚೆಗೆ ಸೈಂಟ್ ಬ್ರಿಜಿಡ್ಸ್ ಚರ್ಚ್ ಮೆಸ್ ಹಾಲ್ ನಲ್ಲಿ ನಡೆಯಿತು.
ಪುತ್ತೂರು ವಲಯದ ಲ್ಯಾನ್ಸಿ ಮಸ್ಕರೇನಸ್ ಹಾಗೂ ಗ್ಸೇವಿಯರ್ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದರು. ಅಭ್ಯರ್ಥಿಗಳ ಹೆಸರು ಸೂಚಿಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.










ಅಧ್ಯಕ್ಷರಾಗಿ ಸೆಬೆಸ್ಟಿಯನ್ ಕ್ರಾಸ್ತ, ಉಪಾಧ್ಯಕ್ಷರಾಗಿ ಅಪೋಲಿನ್ ಡಿಸೋಜಾ, ಕಾರ್ಯದರ್ಶಿಯಾಗಿ ಸಂತೋಷ್ ಕ್ರಾಸ್ತ, ಸಹ ಕಾರ್ಯದರ್ಶಿಯಾಗಿ ಪಿಯುಸ್ ಕ್ರಾಸ್ತ, ಖಜಾಂಜಿಯಾಗಿ ಲೂರ್ದ್ ಮೇರಿ, ಸ್ತ್ರೀ ಹಿತ ಸಂಚಾಲಕಿಯಾಗಿ ಮಾರ್ಗರೇಟ್ ಮೇರಿ, ಯುವ ಹಿತ ಸಂಚಾಲಕರಾಗಿ ವಿವಿನ್ ಜೀವನ್ ಮೊಂತೆರೋ, ಅಮ್ಚೊ ಸಂದೇಶ್ ಪ್ರತಿನಿಧಿಯಾಗಿ ಗಾಡ್ ಫ್ರೀ ಮೊಂತೆರೋ, ರಾಜಕೀಯ ಸಂಚಾಲಕರಾಗಿ ನವೀನ್ ಮಚಾದೊ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ರೊನಾಲ್ಡ್ ಜೋಸೆಫ್ ಡಿಸೋಜಾ, ನಿಕಟ ಪೂರ್ವ ಅಧ್ಯಕ್ಷರಾಗಿ ಪ್ರೇಮ್ ಪ್ರಕಾಶ್ ಡಿಸೋಜಾ ಚಿಕ್ಕನಡ್ಕ ಆಯ್ಕೆಯಾದರು.
ಧರ್ಮ ಗುರುಗಳಾದ ವಂದನೀಯ ರೆವೆರೆಂಡ್ ಫಾ. ವಿಕ್ಟರ್ ಡಿಸೋಜಾ ರವರು ನೂತನವಾಗಿ ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುವ ಮುಖಾಂತರ ಕಥೋಲಿಕ್ ಸಭಾ ಸುಳ್ಯ ಘಟಕವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಸಭೆಯಲ್ಲಿ ಕಥೋಲಿಕ್ ಸಭಾ ಸುಳ್ಯ ಘಟಕದ ಅಜೀವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಂತೋಷ್ ಕ್ರಾಸ್ತ ಸ್ವಾಗತಿಸಿ ವಂದಿಸಿದರು.










